ಮುಂಬೈ: ಬಾಲಿವುಡ್ ನ ನಟಿ ಕಂಗಾನಾ ರಾಣಾವುತ್ ಪರಿಸರವಾದಿ ಸದ್ಗುರು ಮೇಲೆ ಹರಿಹಾಯ್ದಿದ್ದಾರೆ. ಪರಿಸರ ರಕ್ಷಣೆ ಅಂತಲೇ ಹೇಳಿಕೊಂಡು ಓಡಾಡೋ ನೀವೂ, ದೀಪಾವಳಿ ಹಬ್ಬಕ್ಕಾಗಿಯೇ ಮೂರು ದಿನ ವಾನಗಳನ್ನ ಬಳಸದೆ ಆಫೀಸ್ ಗೆ ಹೋಗಬಾರದು.ಅದರಿಂದ ಪರಿಸರ ಮಾಲಿನ್ಯ ತಪ್ಪುತ್ತದ ಅಲ್ವೇ ಅಂತಲೇ ಕೇಳಿದ್ದಾರೆ ಕಂಗನಾ.
ಪರಿಸರ ಪ್ರೇಮಿ ಸದ್ಗುರು ಸದಾ ಪರಿಸರದ ಕಾಳಜಿಯನ್ನ ಇಟ್ಟುಕೊಂಡೋರು. ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯ ಅಗುತ್ತದೆ.ಅದಕ್ಕೆ ಪಟಾಕಿ ಸಿಡಿಸೋದನ್ನ ಬ್ಯಾನ್ ಮಾಡಿ ಅಂತಲೇ ಹೇಳಿಕೆ ನೀಡಿದ್ದಾರೆ.
ಇಷ್ಟೇ ನೋಡಿ, ಕಂಗನಾ ರಾಣಾವುತ್ ರೊಚ್ಚಿಗೆದ್ದು ಸದ್ಗುರವನ್ನ ವಿರುದ್ಧ ಕಿಡಿಕಾರಿದ್ದಾರೆ. ಪಟಾಕಿ ಸಿಡಿಸೋದರಿಂದ ಪರಿಸರ ಮಾಲಿನ್ಯ ಆಗುತ್ತದೆ. ಸರಿ, ವಾಹನ ಚಲಾಯೊಸೋದ್ರಿಂದಲೂ ಪರಿಸರ ಮಾಲಿನ್ಯ ಆಗುತ್ತದೆ. ಹಾಗಾಗಿಯೇ ಹಬ್ಬ ಮುಗಿಯೋವರೆಗೂ ಕಚೇರಿಗೆ ಹೋಗಲು ಯಾರು ವಾಹನ ಬಳಸಬೇಡಿ. ಆ ಮೂರು ದಿನಗಳನ್ನ ಮಕ್ಕಳಿಗೆ ಪಟಾಕಿ ಹೊಡೆಯಲು ಬಿಡಿ ಅಂತಲೇ ಸದ್ಗುರುಗೆ ಇನ್‌ಸ್ಟಾಗ್ರಾಮ್ ಮೂಲಕ ಸಲಹೆ ಕೊಟ್ಟಿದ್ದಾರೆ ಕಂಗನಾ ರಾಣಾವುತ್.
PublicNext
04/11/2021 11:23 am