ಬೆಂಗಳೂರು:ಭಜರಂಗಿ-2 ಸಿನಿಮಾದ ಖಳನಾಯಕ ಪಾತ್ರಧಾರಿ ಚೆಲುವು ರಾಜ್ ಅತೀವ ದುಃಖದಲ್ಲಿಯೇ ಇದ್ದಾರೆ. ಅಪ್ಪು ಹೋದ ದುಃಖ ಒಂದು ಕಡೆ ಇದೆ. ತಮ್ಮ ಭಜರಂಗಿ-2 ಚಿತ್ರಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಬಂದರೂ ಜನ ಥಿಯೇಟರ್ ಗೆ ಬರ್ತಿಲ್ಲ. ಏನ್ ಮಾಡೋದು. ಇಲ್ಲಿಗೆ ಮುಗಿದು ಹೋಯ್ತೆ ನಮ್ಮ ಭವಿಷ್ಯ ಅಂತ ಗೋಳಿಡುತ್ತಿದ್ದಾರೆ.
ಭಜರಂಗಿ-2 ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಆದರೆ ಪುನೀತ್ ನಿಧನದಿಂದ ಜನರು ದುಃಖದಲ್ಲಿಯೆ ಉಳಿದು ಬಿಟ್ಟರು. ಪುನೀತ್ ಅಂತ್ಯಕ್ರಿಯೆ ಬಳಿಕವೂ ಜನ ಥಿಯೇಟರ್ ಕಡೆಗೆ ಮುಖ ಮಾಡ್ತಿಲ್ಲ. ಇದರಿಂದ ಚಿತ್ರದ ಖಳನಾಯಕ ಪಾತ್ರಧಾರಿ ಚೆಲುವ ರಾಜ್ ಎರಡೆರಡು ದುಃಖದಲ್ಲಿದ್ದಾರೆ. ಇತ್ತ ಪುನೀತ್ ಹೋದ ನೋವು. ಅತ್ತ ಭಜರಂಗಿ-2 ಚಿತ್ರಕ್ಕೆ ಜನಾನೇ ಬರ್ತಿಲ್ಲ ಅನ್ನೋ ಬೇಸರ. ಎರಡೂ ಸೇರಿಯೆ ಚೆಲುವರಾಜ್ ದುಃಖದಲ್ಲಿಯೇ ವೀಡಿಯೋ ಮಾಡಿ ತನ್ನ ನೋವು ಹಂಚಿಕೊಂಡಿದ್ದಾರೆ.
PublicNext
03/11/2021 08:04 pm