ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಚಿತ್ರಕ್ಕೆ ಮೊದಲ ದಿನ ಒಳ್ಳೆ ಪ್ರತಿಕ್ರಿಯೇನೆ ಬಂದಿದೆ. ಆದರೆ ಪುನೀತ್ ಅಕಾಲಿಕ ನಿಧನದಿಂದ ಇಡೀ ನಾಡು ದುಃಖದಲ್ಲಿಯೇ ಇತ್ತು. ಈಗ ಮತ್ತೆ ಸಹಜ ಮನಸ್ಥಿತಿಗೆ ಬರ್ತಿದ್ದಾರೆ ಜನ. ಸಿನಿಮಾ ಟೀಮ್ ಕೂಡ ಮತ್ತೆ ಆಕ್ಟೀವ್ ಆಗಿದೆ. ಈ ಒಂದ್ ಸೂಪರ್ ಡ್ಯೂಪರ್ ಕೆಲಸವನ್ನೂ ಮಾಡಿದೆ ನೋಡಿ.
ಡೈರೆಕ್ಟರ್ ಹರ್ಷ ತಮ್ಮ ಚಿತ್ರಕ್ಕೆ ಮೊದಲ ದಿನ ಸಿಕ್ಕ ಸ್ವಾಗತವನ್ನ ಕ್ಯಾಪ್ಚರ್ ಮಾಡಿಸಿದ್ದಾರೆ. ಅದನ್ನ ಕಂಡ್ರೆ ನಿಮಗೂ ಉತ್ಸಾಹ ಜಾಸ್ತಿ ಆಗುತ್ತದೆ. ಅತ್ಯದ್ಭುತ ಅನಿಸೋ ಥಿಯೇಟರ್‌ನ ವಿಶೇಷ ಕ್ಷಣಗಳ ಒಂದ್ ವೀಡಿಯೋ ರೆಡಿ ಮಾಡಲಾಗಿದೆ. ಅದನ್ನ ಈಗ ನೀವೂ ನೋಡಬಹುದು.ಸಿನಿಮಾ ತಂಡವೇ ಅದನ್ನ ಅಧಿಕೃತವಾಗಿಯೇ ಹೊರ ಬಿಟ್ಟಿದೆ.
PublicNext
03/11/2021 06:31 pm