ಹೈದ್ರಾಬಾದ್:ಟಾಲಿವುಡ್ ನಲ್ಲಿ ಬಾಲಯ್ಯ ಅಂತಲೇ ಕರೆಸಿಕೊಳ್ಳುವ ನಟ ನಂದಮುರಿ ಬಾಲಕೃಷ್ಣ ಭುಜದ ನೋವಿನಿಂದ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭುಜದ ನೋವು ಇಂದು ನಿನ್ನೆಯದಲ್ಲ. ಬಹಳ ದಿನಳಿಂದಲೇ ಬಾಲಯ್ಯ ಭುಜದ ನೋವಿನಿಂದ ಬಳಲಿದ್ದಾರೆ. ಸಿನಿಮಾದ ಕೆಲಸ ಇರೋ ಕಾರಣ ಭುಜದ ನೋವಿನ ಶಸ್ತ್ರ ಚಿಕಿತ್ಸೆ ಮಾಡಿಸಿರಲಿಲ್ಲ.ಆದರೆ ನೋವು ತೀವ್ರವಾದ ಕಾರಣ, ಈಗ ವೈದ್ಯ ಡಾ.ಬಿ.ಎಸ್.ಪ್ರಸಾದ್ ನೇತೃತ್ವದಲ್ಲಿ ನಾಲ್ಕು ಗಂಟೆಗಳ ಕಾಲ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿಯೇ ಇರೋ ಬಾಲಯ್ಯ ಕೆಲವು ದಿನ ವಿಶ್ರಾಂತಿಯನ್ನೂ ಪಡೆಯಬೇಕಿದೆ.
PublicNext
02/11/2021 07:56 pm