ಮೈಸೂರು: ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ
ನಗರದ ಬೀಚನಹಳ್ಳಿಯಲ್ಲಿ ಸಿ.ಎಂ, ಪ್ರತಿಕ್ರಿಯೆ ಕೊಟ್ಟಿದ್ದಾರೆ. "ನಮಗೆ ಪುನೀತ್ ಮೇಲೆ ಅಪಾರ ಗೌರವ ಇದೆ, ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ ಸಿದ್ದರಾಮಯ್ಯ ತಮ್ಮ ಪ್ರಸ್ತಾಪ ಸಲ್ಲಿಸಲಿ, ಸರ್ಕಾರ ಸಮಯ ಸಂದರ್ಭ ನೋಡಿಕೊಂಡು ನಮ್ಮ ಪ್ರಸ್ತಾಪ ಸಿದ್ದಪಡಿಸುತ್ತೇವೆ" ಎಂದರು.
ಎಲ್ಲದಕ್ಕೂ ಒಂದು ನಿಯಮ ಪಾಲನೆ ಇರುತ್ತೆ. ಅದರ ಅಡಿಯಲ್ಲಿ ನಾವು ಸಾಗುತ್ತೇವೆ.
ಪುನೀತ್ ರಾಜ್ ಕುಮಾರ್ ಎಲ್ಲಾ ಗೌರವಕ್ಕೂ ಅರ್ಹರು.ಅವರಿಗೆ ಇಂತಹ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಬೇಕೆಂದು ಬೊಮ್ಮಾಯಿ ನುಡಿದರು.
PublicNext
02/11/2021 02:40 pm