ಹೈದ್ರಾಬಾದ್: ಟಾಲಿವುಡ್ ನಲ್ಲಿ ಭಾರಿ ಹಂಗಾಮಾ ಮಾಡ್ತಿರೋ ಟ್ರಿಪಲ್ R ಚಿತ್ರದ ದೃಶ್ಯ ತುಣುಕಿನ ಒಂದು ವೀಡಿಯೋ ಈಗ ಹೊರ ಬಿದ್ದಿದೆ. ಈ ಒಂದೇ ಒಂದು ವೀಡಿಯೋವನ್ನ ಮಿಲಿಯನ್ ಗಟ್ಟಲೆ ಜನ ಈಗಾಗಲೇ ವೀಕ್ಷಿಸಿದ್ದಾರೆ.
ಡೈರೆಕ್ಟರ್ ರಾಜಮೌಳಿ ಸಿನಿಮಾ ಅಂದ್ರೇನೆ ಹಾಗೆ. ವಿಶೇಷವಾಗಿಯೇ ಸೆಳೆಯುತ್ತವೆ.ಜ್ಯೂನಿಯರ್ ಎನ್.ಟಿ.ಆರ್.ಹಾಗೂ ರಾಮಚರಣ್ ತೇಜಾ ಅಭಿನಯದ ಈ ಚಿತ್ರದಲ್ಲಿ ಅದ್ಭುತವಾದ ಕಥೆಯನ್ನೆ ಹೆಣೆಯಲಾಗಿದೆ. ಅದಕ್ಕೆ ಸೂಕ್ತವೆನಿಸೋ ಗ್ರಾಫಿಕಲ್ ಟಚ್ ಕೂಡ ಇದೆ. ಅದಕ್ಕೇನೆ ಈಗ ಚಿತ್ರದ ದೃಶ್ಯ ತುಣುಕಿನ ವೀಡಿಯೋ ಭಾರಿ ಸೌಂಡ್ ಮಾಡುತ್ತಿದೆ.400 ಕೋಟಿ ಬಜೆಟ್ ನ ಈ ಚಿತ್ರ ಮುಂದಿನ ವರ್ಷ ಜನವರಿ ರಂದು ರಿಲೀಸ್ ಆಗುತ್ತಿದೆ.
PublicNext
01/11/2021 08:47 pm