ಬೆಂಗಳೂರು : ಕರುನಾಡು ಬರಿದಾಗಿಸಿ ಹೋದ ಅಭಿಮಾನಿಗಳ ದೇವರು ಅಪ್ಪು ಕೊನೆಯದಾಗಿ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ಚಿತ್ರದ ಇನ್ನು ಕೇವಲ 9 ದಿನದ ಶೂಟಿಂಗ್ ಮಾತ್ರ ಬಾಕಿ ಇತ್ತು. ಆದರೆ ವಿಧಿಯಾಟಕ್ಕೆ ಪುನೀತ್ ಇಹಲೋಕ ತ್ಯಜಿಸಿದ್ದಾರೆ.
ಇನ್ನು ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಡಬ್ಬಿಂಗ್ ಕೂಡ ಆಗಿಲ್ಲ ಆದ್ರೆ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸನ್ನದ್ಧವಾಗಿದೆ. ಈ ಕುರಿತು ಚಿತ್ರ ತಂಡ ಯಾವುದೇ ಕಾರಣಕ್ಕೂ ಜೇಮ್ಸ್ ಸಿನಿಮಾವನ್ನ ಬಿಡುಗಡೆ ಮಾಡದೆ ಬಿಡೋದಿಲ್ಲಾ. ಚಿತ್ರ ತೆರೆ ಕಾಣುತ್ತದೆ ಎಂದಿದ್ದಾರೆ.
ಸದ್ಯ ಸಿನಿಮಾದ ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಇದ್ದ, ಪುನೀತ್ ಪಾತ್ರಕ್ಕೆ ಡಬ್ಬಿಂಗ್ ಮಾಡಿಸುವ ಪ್ರಯತ್ನದಲ್ಲಿದೆ ಚಿತ್ರ ತಂಡ ಅಪ್ಪು ಪಾತ್ರಕ್ಕೆ ಶಿವರಾಜ್ ಕುಮಾರ್ ಅವರಿಂದ ಡಬ್ಬಿಂಗ್ ಮಾಡಿಸೋ ಬಗ್ಗೆ ಯೋಚಿಸುತ್ತಿದೆ.ನಿರ್ದೇಶಕ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರೋ ಜೇಮ್ಸ್ ಸಿನಿಮಾದಲ್ಲಿ ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಜೇಮ್ ಸಿನಿಮಾದಲ್ಲೂ ಅಪ್ಪುಗೆ ಜೊತೆಯಾಗಿದ್ದಾರೆ.
PublicNext
01/11/2021 12:30 pm