ಬೆಂಗಳೂರು : ಕರುನಾಡು ಬರಿದಾಸಿ ಆಕಾಶ ದತ್ತ ಪ್ರಯಾಣ ಬೆಳೆಸಿದ ಅಪ್ಪು ನೆನಪು ಅಮರ. ಹೃದಯಾಘಾತಕ್ಕೆ ಒಳಗಾಗಿ ನಟ ಪುನೀತ್ ರಾಜ್ ಕುಮಾರ್ ವಿಧಿವಶರಾಗಿರುವ ಸುದ್ದಿಯನ್ನು ಈ ಕ್ಷಣಕ್ಕೂ ನಂಬಲ ಸಾಧ್ಯವಾಗುತ್ತಿಲ್ಲ. ಕರುನಾಡು ಕಂಬನಿಯಲ್ಲಿ ಮುಳುಗಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡೀಯೋದಲ್ಲಿ ಮಣ್ಣಲ್ಲಿ ಮಣ್ಣಾದರೂ ನೆನಪು ಚಿರಂಜೀವಿಯಾಗಿವೆ.
ಸದ್ಯ ರಾಜಕುಮಾರನ ನಿವಾಸದಲ್ಲಿ ಪುನೀತ್ ಫೋಟೋ ವೈರಲ್ ಆಗಿದೆ.ದೊಡ್ಮನೆ ಕುಡಿ ನಟ ಪುನೀತ್ ರಾಜ್ ಕುಮಾರ್ ಅವರು ಸದಾಶಿವ ನಗರದ ಮನೆಯಲ್ಲಿ ಖುಷಿ ಖುಷಿಯಿಂದ ಇದ್ದ ಪುನೀತ್ ಈಗಾ ಆ ಮನೆಯಲ್ಲಿ ಫೋಟೋವಾಗಿ, ಗೋಡೆಯ ಮೇಲಿದ್ದಾರೆ. ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಪುನೀತ್ ನಿವಾಸದಲ್ಲಿ ಗೋಡೆಯ ಮೇಲೆ ಅಪ್ಪು ಫೋಟೋ ಹಾಕಲಾಗಿದ್ದು, . ಅದರ ಹಿಂಭಾಗದಲ್ಲಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮಅವರ ಫೋಟೋಗಳು ಇವೆ. ಹೂವಿನ ಹಾರ ಹಾಕಿರುವ ಪುನೀತ್ ಫೋಟೋ ಕಂಡ ಕಣ್ಣೀರಿಡುತ್ತಿದ್ದಾರೆ.
PublicNext
01/11/2021 10:22 am