ಮಧುರೈ: ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಒಳಗಾಗಿರೋ ರಜನಿಕಾಂತ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲೂ ಆಸ್ಪತ್ತೆಯಿಂದಲೂ ಡಿಸ್ಚಾರ್ಜ್ ಕೂಡ ಆಗುತ್ತಾರೆ.ಆದರೆ ಅದಕ್ಕೂ ಮೊದಲೇ ರಜನಿಕಾಂತ್ ಫ್ಯಾನ್ಸ್ ಈ ಕೆಲಸ ಮಾಡಿಬಿಟ್ಟಿದ್ದಾರೆ.
ರಜನಿಕಾಂತ್ ದೇಶ-ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿದ್ದಾರೆ. ರಜನಿಕಾಂತ್ ಸಿನಿಮಾ ಬಂದ್ರೆ ಸಾಕು. ಅಭಿಮಾನಿಗಳಿಗೆ ಅದು
ಅತಿ ದೊಡ್ಡ ಹಬ್ಬವೇ ಆಗಿರುತ್ತದೆ. ಅದರಂತೆ ರಜನಿಗೆ ಚೆಕಪ್ ಗೋ ಇಲ್ಲವೇ ಚಿಕಿತ್ಸೆಗೋ ಅಂತ ಆಸ್ಪತ್ರೆಗೆ ದಾಖಲಾದರೆ ಮುಗಿದೇ ಹೋಯಿತು. ಅಭಿಮಾನಿಗಳು ವೃತ್ತಗಳನ್ನ ಕೈಗೊಳ್ಳುತ್ತಾರೆ. ಅದೇ ರೀತಿನೇ ರಜನಿಯ ಮಧುರೈ ಅಭಿಮಾನಿಗಳು, ರಜನಿಕಾಂತ್ ಬೇಗ ಗುಣಮುಖರಾಗಿ ಮನೆಗೆ ಬರಲಿ ಅಂತಲೇ ಈಗ ನೆಲದ ಮೇಲಿನ ಆಹಾರ ಸೇವಿಸೋ (ಮನ್ ಸೋರು) ವೃತ ಮಾಡಿದ್ದಾರೆ. ರಜನಿಯ ಮುಂದಿನ ಸಿನಿಮಾ ಯಶಸ್ವಿಯಾಗಲಿ ಅಂತಲೂ ಪ್ರಾರ್ಥನೆ ಸಲ್ಲಿಸಿದ್ದಾರೆ.
PublicNext
31/10/2021 04:19 pm