ಹೈದ್ರಾಬಾದ್: ಪುನೀತ್ ಅಗಲಿಕೆಯಿಂದ ಇಡೀ ಕನ್ನಡ ಇಂಡಸ್ಟ್ರೀ ದುಃಖತಪ್ತವಾಗಿದೆ.ಪಕ್ಕದ ಟಾಲಿವುಡ್ ನಲ್ಲೂ ಚಿರಪರಿಚಿತರಾಗಿದ್ದ ಪುನೀತ್ ಅಲ್ಲೂ ಅನೇಕ ಸ್ನೇಹಿತರನ್ನು ಸಂಪಾದಿಸಿದ್ದರು. ಅವರಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಒಬ್ಬರು. ಇಲ್ಲಿ ನಡೆದ ಪುಷ್ಪಕ ವಿಮಾನಂ ಚಿತ್ರದ ವೇದಿಕೆ ಮೇಲೇನೆ ಪುನೀತ್ ಬಗ್ಗೆ ಹೇಳಿ, ಒಂದು ನಿಮಿಷ ಮೌನಾಚರಣೆ ಮಾಡಿ ಅಲ್ಲು ಅರ್ಜುನ್ ಸಂತಾಪ ಸೂಚಿಸಿದರು.
ಪುನೀತ್ ಮತ್ತು ನಾನು ಚಿರಪರಿಚಿತ ಗೆಳೆಯರು. ಒಟ್ಟಿಗೆ ಕುಳಿತು ಊಟ ಮಾಡಿದ್ದೇವೆ. ಒಂದು ಡ್ಯಾನ್ಸ್ ಶೋದಲ್ಲೂ ಒಟ್ಟಿಗೆ ಜಡ್ಜ್ ಆಗಿದ್ದೇವು. ಯಾವಾಗ ಭೇಟಿಯಾದರೂ ಸರಿಯೇ. ಬೆಂಗಳೂರಿಗೆ ಬನ್ನಿ ಅಂತಲೇ ಪುನೀತ್ ಕರೆಯುತ್ತಿದ್ದರು. ಇಂತಹ ಪುನೀತ್ ಸಾವಿನ ಸುದ್ದಿ ಕೇಳಿ ಶಾಕ್ ಆಗಿದೆ. ಜೀವ ಅನ್ನೋದು ಯಾವಾಗಬೇಕಾದರೂ ಹೋಗಬಹುದು. ಅದಕ್ಕೇನೆ ಇರೋವರೆಗೂ ಚೆನ್ನಾಗಿದ್ದು ಹೋಗಬೇಕು ಎಂದು ವೇದಿಕೆ ಮೇಲೆನೆ ಹೇಳಿದ್ದಾರೆ ಅಲ್ಲು ಅರ್ಜುನ್.
ನಾಯಕ ನಟ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಅಭಿನಯದ ಪುಷ್ಪಕ ವಿಮಾನಂ ಚಿತ್ರದ ಕಾರ್ಯಕ್ರಮಕ್ಕೆ ಬಂದಿದ್ದರು ಅಲ್ಲು ಅರ್ಜುನ್. ಆಗಲೇ ವೇದಿಕೆ ಮೇಲೆ ಅಪ್ಪು ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಅಲ್ಲಿದ್ದೋರಿಗೆ ಒಂದು ನಿಮಿಷ ಮೌನಾಚರಣೆ ಮಾಡಲು ಹೇಳಿ ಸಂತಾಪ ಸೂಚಿಸಿದ್ದಾರೆ.
PublicNext
31/10/2021 02:43 pm