ಬೆಂಗಳೂರು : ಅಭಿಮಾನಿಗಳು ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಮೆರವಣಿಗೆ ಬೆಳಿಗ್ಗೆ 6ರಿಂದ ಶುರುವಾಗಲಿದೆ. 10.30ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಈ ಕುರಿತಂತೆ ರಾಜ್ ಕುಟುಂಬದ ಆಪ್ತರಾದ ಸಾ.ರಾ ಗೋವಿಂದ್ ಅವ್ರು ಮಾಹಿತಿ ನೀಡಿದ್ದು, “ನಾಳೆ ಬೆಳಿಗ್ಗೆ 6 ಗಂಟೆಯಿಂದ ಪಾರ್ಥೀವ ಶರೀರದ ಮೆರವಣಿಗೆ ಆರಂಭವಾಗಲಿದೆ. ಕೆ.ಆರ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಮೂಲಕ, ಯಶವಂತಪುರ, ಆರ್.ಎಂ.ಸಿ ಯಾರ್ಡ್, ಗೋರಗುಂಟೆಪಾಳ್ಯದ ಮೂಲಕ ಕಂಠೀರವ ಸ್ಟುಡಿಯೋವನ್ನು ತಲುಪಲಿದೆ. ಇನ್ನು ಬೆಳಿಗ್ಗೆ 10.30ರೊಳಗೆ ಕಂಠೀರವ ಸ್ಟುಡೀಯೋದಲ್ಲಿ ನಟ ಪುನೀತ್‌ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನೆರವೇರಿಲಿದೆ” ಎಂದಿದ್ದಾರೆ.
PublicNext
30/10/2021 09:51 pm