ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಅಕಾಲಿಕ ಮರಣಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಬ್ಲಿಕ್ ನೆಕ್ಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ನಗರದಲ್ಲಿಂದು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಪುನೀತ್ ರಾಜಕುಮಾರ ಅವರು ಇಷ್ಟು ಬೇಗನೇ ನಮ್ಮನ್ನು ಅಗಲಿ ಹೋಗುತ್ತಾರೆ ಎಂದು ನಾವು ಭಾವಿಸಿದ್ದಿಲ್ಲ. ಅವರ ಅಕಾಲಿಕ ಮರಣ ಸಾಕಷ್ಟು ನೋವನ್ನು ಉಂಟುಮಾಡಿದೆ. ಕುಟುಂಬ ಸಮೇತವಾಗಿ ಕುಳಿತುಕೊಂಡು ನೋಡುವಂತ ಚಿತ್ರಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಸಾಕಷ್ಟು ಅಭಿಮಾನಗಳನ್ನು ಅವರು ಗಳಿಸಿದ್ದರು ಎಂದರು.
ಸಾಕಷ್ಟು ಲವಲವಿಕೆಯಿಂದ ಇದ್ದ ವ್ಯಕ್ತಿ ಪುನೀತ್ ರಾಜ್‍ಕುಮಾರ್ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ನಾಡು ನುಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.
PublicNext
30/10/2021 01:46 pm