ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಮೈಸೂರಿನ ಶಕ್ತಿಧಾಮದ ಆಧಾರ ಸ್ತಂಭವಾಗಿದ್ದ ಪುನೀತ್..!

ಮೈಸೂರು: ಶಕ್ತಿಧಾಮ ಇದು ರಾಜ್ ಕುಟುಂಬದ ಕನಸು. ಈ ಶಕ್ತಿಧಾಮಕ್ಕೆ ಬೆನ್ನೆಲೆಬುಗಾಗಿದ್ದವರು ಪುನಿತ್ ರಾಜ್‍ಕುಮಾರ್.

ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರವಾಗಿದ್ದ ಈ ಶಕ್ತಿಧಾಮಕ್ಕೆ ಪುನೀತ್ ಸಹಕಾರ ನೀಡುತ್ತಿದ್ದರು.

ಪುನೀತ್ ರ ಅಗಲಿಕೆ ಶಕ್ತಿಧಾಮ‌ ಹಾಗೂ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್ ಅಪ್ಪುವನ್ನು ನೆನೆದು ಭಾವುಕ‌ರಾಗಿದ್ದಾರೆ.ಕಳೆದ ವರ್ಷ ಕನ್ನಡದ ಕೋಟ್ಯಧಿಪತಿಯಿಂದ ತಮಗೆ ಬಂದಿದ್ದ 18 ಲಕ್ಷ ರೂ. ಸಂಭಾವನೆಯನ್ನು ಶಕ್ತಿಧಾಮಕ್ಕೆ ಪುನೀತ್ ನೀಡಿದ್ದರು.

ಪ್ರತೀ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯ ವಸ್ತುಗಳನ್ನ ಪುನೀತ್ ಪೂರೈಸುತ್ತಿದ್ದರು.ಹಾಗೂ ಶಕ್ತಿಧಾಮಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಯೋಚನೆಯನ್ನು ಕೂಡ ಹಾಕಿದ್ದರು ನಮ್ಮ ಕನ್ನಡದ ಕಣ್ಮಣಿ ಅಪ್ಪು.

ಸುಮಾರು 8 ಕೋಟಿ ವೆಚ್ಚದ ಲ್ಲಿ ಶಾಲೆ ನಿರ್ಮಾಣಕ್ಕೆ ಕನಸು ಹೊತ್ತಿದ್ದರು ಪುನೀತ್.ಈ ವರ್ಷ ಕೋವಿಡ್ ಗೆ ಮುನ್ನ ಶಕ್ತಿಧಾಮಕ್ಕೆ ಹೋಗಿ ಬಹಳ ಹೊತ್ತು ಮಕ್ಕಳೊಂದಿಗೆ ಸಮಯ ಕಳೆದಿದ್ರು ಜತೆಗೆ ಇತ್ತೀಚಿನ ದಿನಗಳಲ್ಲಿ ಪುನೀತ್ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದರು.

ಮಕ್ಕಳ ಜೊತೆ ಊಟ ಮಾಡೋದಂದ್ರೆ ಅವರಿಗೆ ಬಲು ಇಷ್ಟ,ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡ್ತಿದ್ರು.ಶಿವಣ್ಣ ಅವರೂ ಕೂಡ ಪುನೀತ್ ರ ಯೋಜನೆಗಳಿಗೆ ಕೈಜೋಡಿಸಿದ್ರು. ಶಕ್ತಿಧಾಮದ ಸಲುವಾಗಿ ವಿದೇಶಕ್ಕೆ ಹೋಗಿ ಬರಲು ತಯಾರಿ ಮಾಡ್ತಿದ್ರು.ಹಾಗೂ ಕನ್ನಡದ ಬೇರೆ ಬೇರೆ ನಟರ ಸಹಕಾರ ಪಡೆದು ಶಕ್ತಿಧಾಮಕ್ಕೆ ನೆರವಾಗಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ರು ಅಪ್ಪು.

Edited By : Manjunath H D
PublicNext

PublicNext

30/10/2021 11:28 am

Cinque Terre

103.2 K

Cinque Terre

3