ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನ.12ರಂದು ಲವ್ಲಿ ಸ್ಟಾರ್ ಪ್ರೇಮ ಅಭಿನಯದ ಪ್ರೇಮಂ ಪೂಜ್ಯಂ ಚಿತ್ರ ಬಿಡುಗಡೆ

ಹುಬ್ಬಳ್ಳಿ: ಕೆದಂಬಾಡಿ ಕ್ರಿಯೇಶನ್ಸ್ ನಿರ್ಮಾಣದ ಪ್ರೇಮಂ ಪೂಜ್ಯಂ ಚಿತ್ರವು ನ.12 ರಂದು ದೇಶದಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಬಿ.ಎಂ.ರಾಘವೇಂದ್ರ ಹೇಳಿದರು‌.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸ್ನೇಹ-ಪ್ರೀತಿಯ ಸುತ್ತ ಚಿತ್ರಕಥೆ ಹೊಂದಿರುವ ಪ್ರೇಮಂ ಪೂಜ್ಯಂದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ನಾಯಕನಟರಾಗಿದ್ದಾರೆ. ಇದು ಪ್ರೇಮ್ ನಟನೆಯ 25ನೇ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಪ್ರೇಮ್ ಶ್ರೀಹರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು/ಎ ಪ್ರಮಾಣ ಪತ್ರ' ಸಿಕ್ಕಿದೆ. ಚಿತ್ರವನ್ನು ಕರ್ನಾಟಕ, ಊಟಿ, ಮುನ್ನಾರ್, ಧರ್ಮಶಾಲ ವಿಯೆಟ್ನಾಂ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಯಿತು. 30 ಕೋಟಿ ಬಜೆಟ್ ನ ಈ ಸಿನಿಮಾ ರಾಜ್ಯದಲ್ಲಿ 350 ಕ್ಕೂ ಹೆಚ್ಚು ಪಲ್ಟಿಪ್ಲೇಕ್ಸ್, ಸಿಂಗಲ್ ಟೇಟರ್ ನಲ್ಲಿ ತೆರೆ ಕಾಣಲಿದೆ ಎಂದರು.

ನಾಯಕ ನಟ ಪ್ರೇಮ್ ಮಾತನಾಡಿ, ಪ್ರೇಮಂ ಪೂಜ್ಯಂ' ಚಿತ್ರವನ್ನು ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಸಹ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಚಿತ್ರದಲ್ಲಿ 12 ಹಾಡುಗಳಿವೆ. ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದು, ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್, ಸಾಧು ಕೋಕಿಲಾ, ಅನು ಪ್ರಭಾಕರ್, ತಪಸ್ವಿನಿ ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಸಹ ತೆರೆ ಹಂಚಿಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ಬೃಂದಾ ಆಚಾರ್ಯ, ಮಾಸ್ಟರ್ ಆನಂದ ಇದ್ದರು.

Edited By : Manjunath H D
PublicNext

PublicNext

29/10/2021 02:07 pm

Cinque Terre

121.02 K

Cinque Terre

0