ಬೆಂಗಳೂರು:ಸೂಪರ್ ಸ್ಟಾರ್ ರಜನಿಕಾಂತ್ ಗೆ ತಮಿಳು ಕಲಿಸಿದ್ದು ಯಾರು ? ಎರಡೇ ತಿಂಗಳಲ್ಲಿ ರಜನಿಕಾಂತ್ ಪಕ್ಕಾ ತಮಿಳು ಭಾಷೆ ಮಾತನಾಡಲು ಸಾಧ್ಯವಾಗಿದ್ದು ಹೇಗೆ ? ರಜನಿ ಎಲ್ಲ ಸತ್ಯವನ್ನ ಬಲ್ಲ ಆ ವ್ಯಕ್ತಿ ಯಾರು ? ಬೆಂಗಳೂರಲ್ಲಿ ಈಗ ಆ ವ್ಯಕ್ತಿ ಮಾತನಾಡಿದ್ದು ಯಾಕೆ ? ಇಲ್ಲಿದೆ ಡಿಟೈಲ್ಸ್.
ರಜನಿಕಾಂತ್ ಮಾತೃಭಾಷೆ ಮರಾಠಿ. ಕನ್ನಡ ಕೂಡ ಬರುತ್ತದೆ ಅನ್ನೋದು ಕೂಡ ಅಷ್ಟೇ ಸತ್ಯ. ಈ ಸೂಪರ್ ಸ್ಟಾರ್ ಒಂದು ಕಾಲದಲ್ಲಿ ಬೆಂಗಳೂರಲ್ಲಿಯೇ ಕಂಡೆಕ್ಟರ್ ಆಗಿಯೇ ಕೆಲಸ ಮಾಡಿದ್ದು ಇತಿಹಾಸ. ಆದರೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮಿಳು ಭಾಷೆಯನ್ನ ಕಲಿತ ಪರಿ ಇದೆ ನೋಡಿ, ಅದು ನಿಜಕ್ಕೂ ತುಂಬಾ ವಿಶೇಷವಾಗಿಯೇ ಇದೆ. ಅದನ್ನ ಕಲಿಸಿರೋದು ಒಬ್ಬ ವಿಶೇಷ ವ್ಯಕ್ತಿ. ಅವರೇ ಗೆಳೆಯ ರಾಜಬಹದ್ದೂರ್.
ಈ ರಾಜಬಹ್ದೂರ್ ಬೇರೆ ಯಾರೋ ಅಲ್ಲ. ರಜನಿಯ ಸಾಥಿ. ರಜನಿ ಕಂಡೆಕ್ಟರ್ ಆಗಿದ್ದರೇ, ರಾಜಬದ್ದೂರ್ ಡ್ರೈವರ್ ಆಗಿದ್ದರು. ಇವರೇ ಹೇಳುವಂತೆ ರಜನಿ ಎರಡೇ ತಿಂಗಳಲ್ಲಿ ತಮಿಳು ಕಲಿತಿದ್ದಾರೆ. ಡೈರೆಕ್ಟರ್ ಕೆ.ಬಾಲಚಂದರ್ ಅವರಿಗೂ ಆಶ್ಚರ್ಯ ಮೂಡಿಸಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅದುವೇ ಅಪೂರ್ವ ರಾಗಂಗಳ್ ಸಿನಿಮಾ. ಹೀಗೆ ಸುಮಾರು ವಿಷಯಗಳನ್ನ ರಾಜಬಹುದ್ದೂರ್ ಹೇಳಿದ್ದಾರೆ. ವಿಶೇಷ ಅಂದ್ರೆ, ರಜನಿ ತಮಗೆ ಬಂದಿದ್ದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ರಾಜಬಹದ್ದೂರ್ ಗೂ ಅರ್ಪಿಸಿದ್ದರು. ಅದಕ್ಕೇನೆ ರಾಜಬಹದ್ದೂರ್ ಈಗ ಗೆಳೆಯನ ಆ ದಿನಗಳನ್ನ ನೆನಪಿಸಿಕೊಂಡು ಖುಷಿಪಟ್ಟಿದ್ದಾರೆ.
PublicNext
26/10/2021 05:37 pm