ಬೆಂಗಳೂರು: ಜಾಗ್ವಾರ ಚಿತ್ರ ಖ್ಯಾತಿಯ ನಿಖಿಲ್ ಕುಮಾರ್ ಸ್ವಾಮಿ ತಮ್ಮ ಜಾಗ್ವಾರ ಚಿತ್ರ 5 ವರ್ಷ ಪೂರೈಸಿದ ಸಂಭ್ರಮದಲ್ಲಿ ಭಾಗವಹಿಸಿದ್ದರು.ದಾಸರಹಳ್ಳಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಖಿಲ್ ಮನ ಬಿಚ್ಚಿ ಮಾತನಾಡಿದ್ದಾರೆ. ತಮ್ಮ ಸಿನಿಮಾ ಭವಿಷ್ಯದ ಬಗ್ಗೆನೂ ಇಲ್ಲಿಯೇ ಬಹಿರಂಗಪಡಿಸಿದ್ದಾರೆ. ಅದ್ಹಾಗೆ ಏನು ಹೇಳಿದ್ದಾರೆ. ಹೇಳ್ತಿವಿ ನೋಡಿ.
ದಾಸರಹಳ್ಳಿಯಲ್ಲಿ ಮೊನ್ನೆ ಜಾಗ್ವಾರ್ ರಿಲೀಸ್ ಆದ 5 ವರ್ಷದ ಸಂಭ್ರಮಾಚರಣೆ ಇತ್ತು. ಅಲ್ಲಿಗೆ ನಿಖಿಲ್ ಕುಮಾರ್ ಸ್ವಾಮಿ ಕೂಡ ಆಗಮಿಸಿದ್ದರು. ತಮ್ಮ ಚಿತ್ರದ ಬಗ್ಗೆ ಮಾತನಾಡಿದರು.ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದು ಬಿಡಿ ಅಂತಲೂ ಅನೇಕರು ಕೇಳ್ತಿದ್ದಾರೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ, ನಿಖಿಲ್ ರಿಯಾಕ್ಟ್ ಮಾಡಿದರು.
ನಾನು ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ.ಒಂದು ಸಿನಿಮಾ ಈಗಾಗಲೇ ಒಪ್ಪಿಕೊಂಡಿದ್ದೇನೆ. ಅದನ್ನ ಬಿಡಲು ಮನಸ್ಸು ಆಗುತ್ತಿಲ್ಲ. ಅಲ್ಲದೇ ಈಗಾಗಲೇ ಸರವಣ ಈ ವಿಚಾರವಾಗ ಮಾತನಾಡಿದ್ದಾರೆ. ಇನ್ನು ಸಿನಿಮಾ ಸಾಕು. ಸಂಪೂರ್ಣವಾಗಿ ರಾಜಕೀಯಕ್ಕೆ ಬಂದು ಬಿಡು ಅಂತಲೇ ಹೇಳುತ್ತಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.
PublicNext
25/10/2021 05:21 pm