ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್ ಸದ್ಯ ಬೇಡಿಕೆಯ ಸೂಪರ್ ಸ್ಟಾರ್. ಬಾಲಿವುಡ್ ಕೂಡ ಈ ನಾಯಕನ ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಕೆಜಿಎಫ್ ಕಾರಣ ಅಂತ ಹೇಳಬೇಕಿಲ್ಲ. ಆದರೆ, ಈಗ ಈ ನಾಯಕ ನಟ ಬಾಲಿವುಡ್ ನಿಂದ ಬಂದ 700 ಕೋಟಿ ಆಫರ್ ಒಂದನ್ನ ಬಿಟ್ಟು ಬಂದಿದ್ದಾರೆ. ಯಾಕೆ..? ಹೇಳ್ತೀವಿ ನೋಡಿ.
ರಾಕಿಂಗ್ ಸ್ಟಾರ್ ಯಶ್ ಬೇಡಿಕೆ ಬಾಲಿವುಡ್ ನಲ್ಲೂ ಇದೆ. ಇಲ್ಲಿಯ ನಿರ್ಮಾಣ ಸಂಸ್ಥೆಯೊಂದು ಯಶ್ ಜೊತೆಗೆ 5 ವರ್ಷದ ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತು. 700 ಕೋಟಿ ಆಫರ್ ಮುಂದಿಟ್ಟು 5 ವರ್ಷ ನಮ್ಮ ಸಂಸ್ಥೆಗೆ ಸಿನಿಮಾ ಮಾಡಿ ಅಂತಲೇ ಕೇಳಿಕೊಂಡಿತ್ತು.ಆದರೆ ಯಶ್ ಡಿಮಾಂಡ್ ಇಷ್ಟೇ ಆಗಿಲಿಲ್ಲ. ಅದು 1000 ಕೋಟಿನೇ ಆಗಿತ್ತು. ಸಾವಿರ ಕೋಟಿ ಕೊಡಿ, 5 ವರ್ಷ ಸಿನಿಮಾ ಮಾಡ್ತೀನಿ ಅಂದ್ರಂತೆ. ನಿರ್ಮಾಣ ಸಂಸ್ಥೆ ಅದಕ್ಕೆ ಒಪ್ಪದ ಕಾರಣ, ಯಶ್ 700 ಕೋಟಿ ಆಫರ್ ಬಿಟ್ಟು ಬಂದಿದ್ದಾರೆ ಅನ್ನೋ ಸುದ್ದಿ ಈಗ ಫುಲ್ ವೈರಲ್ ಆಗಿದೆ.
PublicNext
24/10/2021 05:06 pm