ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. 164 ದಿನದ ಚಿತ್ರೀಕರಣದ ಸುದೀರ್ಘ ಪಯಣ ಈಗ ಎಂಡ್ ಆಗಿದೆ. ಆ ಕ್ಷಣ ನಿಜಕ್ಕೂ ಇಡೀ ಟೀಮ್ ಗೆ ಭಾವುಕ ಕ್ಷಣವೇ ಆಗಿತ್ತು.
777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿ ಕೂಡ ಅಭಿನಯಿಸಿದೆ. ಕಿರಣ್ ರಾಜ್ ನಿರ್ದೇಶನದಲ್ಲಿಯೇ ನಾಯಿ ಮತ್ತು ರಕ್ಷಿತ್ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಈಗ ಇಡೀ ಚಿತ್ರೀಕರಣದ ಕೆಲಸ ಪೂರ್ಣಗೊಂಡಿದೆ. ಸಿನಿಮಾ ತಂಡವೂ ಕುಂಬಳಕಾಯಿ ಒಡೆದು ಚಿತ್ರೀಕರಣದ ಕೆಲಸಕ್ಕೆ ಗುಡ್ ಬಾಯ್ ಹೇಳಿದೆ. 164 ದಿನಗಳ ಅಟ್ಯಾಚ್ ಮೆಂಟ್ ಅಲ್ವಾ. ಅದಕ್ಕೇನೆ ಟೀಮ್ ಸದಸ್ಯರು ಕೊಂಚ ಭಾವುಕರಾಗಿದ್ದರು. ಇನ್ಮುಂದೆ ಚಾರ್ಲಿ ಜೊತೆಗೆ ಶೂಟಿಂಗ್ ಇರೋದಿಲ್ಲ ಅನ್ನೊದೇ ಆ ಕ್ಷಣದ ಟೀಮ್ ನ ಮನದಲ್ಲಿರೋ ಬೇಸರ ಅಷ್ಟೆ.
PublicNext
23/10/2021 02:01 pm