ಬೆಂಗಳೂರು: ದಿವಂಗತ ನಟ ಚಿರಂಜೀವ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾಗೆ ಇಂದು ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮಗನ ಹುಟ್ಟುಹಬ್ಬದ ಪ್ರಯುಕ್ತ ಮೇಘನಾ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.
ರಾಯನ್ ಸರ್ಜಾ ಹುಟ್ಟಿ ಇಂದಿಗೆ ಒಂದು ವರ್ಷ ಕಳೆದಿದ್ದು, ಮೇಘನಾ ರಾಜ್ ಮಧ್ಯರಾತ್ರಿ 12 ಗಂಟೆಗೆ ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಪ್ರೀತಿಯ ಮಗನಿಗೆ ವಿಶ್ ಮಾಡಿದ್ದಾರೆ.
ಫೋಟೋ ಕ್ಯಾಪ್ಷನ್ ನಲ್ಲಿ ನಮ್ಮ ಮಗು.. ನಮ್ಮ ಜಗತ್ತು.. ನಮ್ಮ ವಿಶ್ವ.. ನಮಗೆ ಎಲ್ಲ.. ಚಿರು ನಮ್ಮ ಪುಟ್ಟ ರಾಜಕುಮಾರನಿಗೆ 1 ವರ್ಷವಾಗಿದೆ. ಅವನು ಅಮ್ಮಾ ನಿಲ್ಲಿಸು ಎಂದು ಹೇಳುವವರೆಗೂ ನಾನು ರೇಗಿಸುತ್ತಲೇ ಇರುತ್ತೇನೆ. ಅವನು ತನ್ನ ಕಣ್ಣುಗಳನ್ನು ನನ್ನ ಕಡೆ ತಿರುಗಿಸಿ ನೋಡುವವರೆಗೂ ಚುಂಬಿಸುತ್ತಲೇ ಇರುತ್ತೇನೆ ಮತ್ತು ನಂತರ ಕೂಡ ಅವನನ್ನು ಚುಂಬಿಸುತ್ತೇನೆ. ಐ ಲವ್ ಯೂ ಕಂದ.. ನೀನು ಬಹಳ ಬೇಗ ಬೆಳೆದೆ. ನಾನು ನಿನ್ನನ್ನು ಶಾಶ್ವತವಾಗಿ ನನ್ನ ತೋಳಿನಲ್ಲಿ ಮುದ್ದಾಡಲು ಬಯಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ರಾಯನ್ ಎಂದು ಶುಭಾಶಯ ತಿಳಿಸಿದ್ದಾರೆ.
ರಾಯನ್ ರಾಜ್ ಸರ್ಜಾ 2020ರ ಅಕ್ಟೋಬರ್ 22ರಂದು ಜನಿಸಿದ.
PublicNext
22/10/2021 03:37 pm