ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತನ್ನ ಮತ್ತು ಪತಿ ರಾಜ್ ಕುಂದ್ರಾ ಮೇಲೆ ಕೇಸ್ ಹಾಕಿದ್ದ ನಟಿ ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.
ಅಕ್ಟೋಬರ್ 14 ರಂದು ಶೆರ್ಲಿನ್ ಚೋಪ್ರಾ ದೂರು ಕೊಟ್ಟಿದ್ದರು. ರಾಜ್ ಕುಂದ್ರಾ ಲೈಂಗಿಕ ಕಿರುಕುಳ ಮತ್ತು ಜೀವ ಬೆದರಿಕೆ ಹಾಕಿದ್ದರು. ಶಿಲ್ಪಾ ಶೆಟ್ಟಿ ವಿರುದ್ಧವೂ ಶೆರ್ಲಿನ್ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಈಗ ಶಿಲ್ಪಾ ಶೆಟ್ಟಿ, ನಟಿ ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
-------
PublicNext
19/10/2021 10:36 pm