ಬೆಂಗಳೂರು: ಕನ್ನಡದ ನಟಿ ಶ್ರೀಲೀಲಾ ಸದ್ಯ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರೋ ಯುವ ನಾಯಕಿ ನಟಿ.ಕಿಸ್-ಭರಾಟೆಯಂತಹ ಚಿತ್ರದ ಮೂಲಕ ಕನ್ನಡಿಗರ ಹೃದಯ ಕದ್ದ ಚೆಲುವೆ. ತಂದೆ ಸುರಪನೇನಿ ಸುಭಾಕರ್ ರಾವ್. ತಾಯಿ ಡಾಕ್ಟರ್ ಸ್ವರ್ಣ ಲತಾ. ಆದರೆ ಈ ನಟಿಯ ವೈಯಕ್ತಿಕ ಬದುಕು ಈಗ ಅಷ್ಟೇನೂ ಚೆನ್ನಾಗಿಲ್ಲ. ಶ್ರೀಲೀಲಾ ನನ್ನ ಮಗಳು ಅಲ್ಲವೇ ಅಲ್ಲ ಅಂತಲೇ ಶ್ರೀಲೀಲಾ ತಂದೆ ಉದ್ಯಮಿ ಸುರಪನೇನಿ ಸುಭಾಕರ್ ರಾವ್ ಬಾಂಬ್ ಸಿಡಿಸಿದ್ದಾರೆ.
ಶ್ರೀಲೀಲಾ ಇಲ್ಲಿವರೆಗೂ ತಮ್ಮ ಭರಾಟೆ,ಕಿಸ್ ಚಿತ್ರದ ಮೂಲಕವೇ ಸದ್ದು ಮಾಡುತ್ತಿದ್ದರು. ಆದರೆ ಈಗ ವೈಯಕ್ತಿಕ ವಿಚಾರದಿಂದಲೇ ಸುದ್ದಿಯಲ್ಲಿದ್ದಾರೆ. ಶ್ರೀಲೀಲಾ ತಂದೆ ಸುರಪನೇನಿ ಸುಭಾಕರ್ ರಾವ್, ಶ್ರೀಲೀಲಾ ನನ್ನ ಮಗಳೇ ಅಲ್ಲ. ನಾನು ನನ್ನ ಪತ್ನಿಯಿಂದ ದೂರವಾದ ಮೇಲೆ ಶ್ರೀಲೀಲಾ ಹುಟ್ಟಿದ್ದಾಳೆ. ನಾನು ಮತ್ತು ಸ್ವರ್ಣ ಲತಾ ದೂರ ಆಗಿ 20 ವರ್ಷಗಳೇ ಕಳೆದಿವೆ. ನಮ್ಮ ಡಿವೋರ್ಸ್ ಕೇಸ್ ಇನ್ನೂ ಕೋರ್ಟ್ ನಲ್ಲಿಯೇ ಇದೆ. ಆದರೆ, ಶ್ರೀಲೀಲಾ ಆಸ್ತಿ ಹೊಡೆಯಲು ನನ್ನ ಹೆಸರು ಬಳಸಿಕೊಳ್ಳುತ್ತಿದ್ದಾಳೆ. ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸುಭಾಕರ್ ರಾವ್ ತಿಳಿಸಿದ್ದಾರೆ.
PublicNext
18/10/2021 10:27 pm