ಪ್ರಸ್ತುತ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಸಾಲಿನಲ್ಲಿ ಚಲನಚಿತ್ರರಂಗದ ಅನೇಕರು ಇಹಲೋಕ ತ್ಯಜಿಸಿದ್ದಾರೆ. ಸದ್ಯ ಧಾರಾವಾಹಿ ನಟಿ ಉಮಾ ಮಹೇಶ್ವರಿ ತಮ್ಮ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇನ್ನು ನಟಿ ನಿಧನದ ಬಗ್ಗೆ ಶಾಂತಿ ವಿಲಿಯಮ್ಸ್ ಮಾಹಿತಿ ನೀಡಿದ್ದಾರೆ.
ಉಮಾ ಮಹೇಶ್ವರಿ, ಚೆನ್ನೈನಲ್ಲಿ ಭಾನುವಾರ ನಿಧನರಾಗಿದ್ದಾರೆ. ಸಾವಿಗೆ ಮೊದಲು ನೆಲದ ಮೇಲೆ ಉಮಾ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಉಮಾ ನನಗೆ ಮಗಳಿದ್ದಂತೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇವರು ಏಕೆ ಕರೆದೊಯ್ಯುತ್ತಿದ್ದಾನೆಂಬುದು ನನಗೆ ಗೊತ್ತಾಗ್ತಿಲ್ಲ ಎಂದಿದ್ದಾರೆ.
ಉಮಾ ಮಹೇಶ್ವರಿ ಕೆಲ ತಿಂಗಳಿಂದ ಕಾಮಾಲೆ ರೋಗದಿಂದ ಬಳಲುತ್ತಿದ್ದರಂತೆ. ಅದಕ್ಕೆ ಚಿಕಿತ್ಸೆ ನಡೆಯುತ್ತಿತ್ತಂತೆ. ಉಮಾ ಪತಿ, ಪಶು ವೈದ್ಯರಾಗಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಶಾಂತಿ ವಿಲಿಯಮ್ಸ್ ಪೋಸ್ಟ್ ಮಾಡಿದ್ದಾರೆ.
PublicNext
18/10/2021 08:36 pm