ಚಿತ್ರದುರ್ಗ : ಗುರುವಾರ ಆಯುಧ ಪೂಜೆಯೆಂದು ರಾಜ್ಯಾದ್ಯಂತ ತೆರೆಕಾಣಬೇಕಿದ್ದ ಕೋಟಿಗೊಬ್ಬ -3 ತಾಂತ್ರಿಕ ಸಮಸ್ಯೆಯಿಂದಾಗಿ ಸಿನಿಮಾ ಶುಕ್ರವಾರ ತೆರೆಕಂಡಿದೆ. ಇದೀಗ ಈ ಸಿನಿಮಾ ಭಾರೀ ವಿವಾದ ಸೃಷ್ಟಿಸಿದೆ. ಚಿತ್ರದುರ್ಗದ ಸಿನಿಮಾ ವಿತರಕ ಖಾಝಾಫೀರ್ ಅವರು ಸೂರಪ್ಪ ಬಾಬು ಅವರಿಗೆ ಕೋಟಿಗೊಬ್ಬ-3 ಸಿನಿಮಾಕ್ಕೆ 1 ಕೋಟಿ 90 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಚಿತ್ರ ವಿತರಣೆಗೆ ನಿರ್ಮಾಪಕ ಸೂರಪ್ಪ ಬಾಬು ಅವರು 60 ಲಕ್ಷ ಹಣ ಪಡೆದಿದ್ದರು. ಕೋಟಿಗೊಬ್ಬ-3 ಚಿತ್ರ 1 ಕೋಟಿ 90 ಲಕ್ಷಕ್ಕೆ ಖಾಝಾಫೀರ್ ಅವರಿಂದ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಇದೀಗ ಚಿತ್ರನಿರ್ಮಾಪಕರು ಚಿತ್ರವೂ ನೀಡದೆ, ಹಣವೂ ನೀಡದೆ ದಮ್ಕಿ ಹಾಕುತ್ತಿದ್ದಾರೆಂದು ಆರೋಪಿಸಿದರು. ಸಿನಿಮಾ ವಿತರಕ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮೂರು ಜಿಲ್ಲೆಗೆ ಕುಮಾರ್ ಫಿಲಂಸ್ ಮೂಲಕ ಡಿಸ್ಟ್ರೀಬ್ಯೂಷನ್ ಪಡೆದುಕೊಂಡಿದ್ದರು. ಮಾರ್ಚ್ 31ಕ್ಕೆ ಕಾಳಿಂಗ ಹ್ಯಾಡ್ಸ್ ಮೂಲಕ ರಾಂಬಾಬು ಫಿಲಂಸ್ ಗೆ ಹಣ ಸಂದಾಯವಾಗಿದೆ. ಖಾಝಾಫೀರ್ ಸೆಪ್ಟೆಂಬರ್ 23 ಕ್ಕೆ -1 ಲಕ್ಷ, 27 ಕ್ಕೆ-04 ಲಕ್ಷ, ಅಕ್ಟೋಬರ್27ಕ್ಕೆ -05 ಹಣ ಈಗೆ ರಾಂ ಬಾಬು ಪ್ರೋಡಕ್ಷನ್ ಹೆಸರಿಗೆ ಒಟ್ಟು 60 ಲಕ್ಷ ಹಣ ನೀಡಲಾಗಿತ್ತು.
ಉಳಿದ ಹಣ ನೀಡದ ಕಾರಣ ಸಿನಿಮಾ ರಿಲೀಸ್ ಲೈಸನ್ಸ್ ಕೊಟ್ಟಿರಲಿಲ್ಲ, ಇತ್ತ ಸಿನಿಮಾ ಬಿಡಗಡೆ ಆಗದಿದ್ದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣ ವಾಪಾಸ್ ಕೇಳಿದ್ದಕ್ಕೆ ಸೂರಪ್ಪ ಬಾಬುರಿಂದ ಕೊಲೆ ಬೆದರಿಕೆಯೊಡ್ಡಿದ್ದು, ವಿತರಕ ಖಾಝಾಪೀರ್, ಕುಮಾರ್ ಫಿಲಂಸ್ ನ ಕುಮಾರ್ ಗೆ ನಿರ್ಮಾಪಕ ಸೂರಪ್ಪಬಾಬು ರಿಂದ ಅವಾಚ್ಯ ಶಬ್ದಗಳ ನಿಂದಿಸಿದ್ದಾರೆ. ಸೂರಪ್ಪ ಬಾಬು ನಿಂದಿಸಿರುವ ಆಡಿಯೋ ಬಿಡುಗಡೆ ಮಾಡಿದ್ದಾರೆ. ಕೊಲೆ ಬೆದರಕೆ ಹಾಕಿದ ಹಿನ್ನೆಲೆಯಲ್ಲಿ ಸೂರಪ್ಪ ಬಾಬು ವಿರುದ್ದ ದೂರು ಚಿತ್ರದುರ್ಗ ನಗರ ಠಾಣೆಯಲ್ಲಿ ನೀಡಲು ಖಾಝಾಪೀರ್ ಹಾಗೂ ಕುಮಾರ್ ಮುಂದಾಗಿದ್ದಾರೆ.
ಸದ್ಯ ಹಣ ವಾಪಸ್ ಕೇಳಿದ್ದಕ್ಕೆ ಸೂರಪ್ಪ ಬಾಬು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
PublicNext
17/10/2021 01:56 pm