ಮುಂಬೈ: ಬಾಲಿವುಡ್ ನಾಯಕ ನಟ ಹೃತಿಕ್ ರೋಷನ್ ಜಿಮ್ ನಲ್ಲೂ ಡ್ಯಾನ್ಸ್ ಮಾಡಿ ವೈರಲ್ ಆಗಿದ್ದಾರೆ.
ಹಿಂದಿ ಚಿತ್ರರಂಗದ ಈ ಸೂಪರ್ ಹೀರೋಗೆ, ಹಳೆ ಚಿತ್ರಗಳ ಹಿಂದಿ ಹಾಡುಗಳು ಅಂದ್ರೆ ಪ್ರಾಣ. ಅವುಗಳನ್ನ ಕೇಳಿದ್ರೆ ಸಾಕು ರೋಮಾಂಚನಗೊಳ್ಳುತ್ತಾರೆ. ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಈಗ ಹರಿದಾಡುತ್ತಿರೋ ಈ ವೀಡಿಯೋ.
ಹೃತಿಕ್ ರೋಷನ್ ಕೂಡ ಸಿನಿಮಾ ಫ್ಯಾಮಿಲಿಯಿಂದಲೇ ಬಂದೋರು. ಸಿನಿಮಾ ಮತ್ತು ಸಂಗೀತದ ವಾತಾವರಣದಲ್ಲಿಯೇ ಬೆಳೆದ ಹೃತಿಕ್, ಪ್ರತಿ ದಿನ ಜಿಮ್ ನಲ್ಲಿ ಸಂಗೀತಮಯ ವಾತಾವರಣದಲ್ಲಿಯೇ ವರ್ಕೌಟ್ ಮಾಡುತ್ತಾರೆ. ಅದರಂತೆ ಜಿಮ್ ನಲ್ಲಿ ಹಳೆ ಚಿತ್ರಗಳ ಹಿಂದಿ ಹಾಡುಗಳನ್ನ ಕೇಳಿ ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ನೃತ್ಯದ ವೀಡಿಯೋವನ್ನ ಹೃತಿಕ್ ರೋಷನ್ ತಮ್ಮ ಫೇಸ್ ಬುಕ್ ಪೇಜ್ ಅಲ್ಲೂ ಶೇರ್ ಮಾಡಿದ್ದಾರೆ. ಈಗ ಅದು ಎಲ್ಲರ ಗಮನಸೆಳೆಯುತ್ತಿದೆ.
PublicNext
17/10/2021 01:30 pm