ಮುಂಬೈ:ಬಾಲಿವುಡ್ ನ ನಾಯಕ ನಟ ಸನ್ನಿ ಡಿಯೋಲ್ ಅಭಿನಯದ ಗದರ್ ಏಕ್ ಪ್ರೇಮ್ ಕಥಾ ಚಿತ್ರ ತೆರೆಗೆ ಬಂದು ಈಗ 20 ವರ್ಷಗಳೇ ಕಳೆದು ಹೋಗಿವೆ. ಆದರೆ ಸೂಪರ್ ಹಿಟ್ ಆಗಿದ್ದ ಈ ಚಿತ್ರವನ್ನಆಗ ಯಾರೂ ಪಾರ್ಟ್-2 ಮಾಡೋಕೆ ಮುಂದೆ ಬರಲೇ ಇಲ್ಲ.ಇಷ್ಟು ವರ್ಷಗಳು ಕಳೆದ ಮೇಲೆ ಈಗ ಪಾರ್ಟ್-2 ನ್ಯೂಸ್ ಹೊರ ಬಿದ್ದಿದೆ.
ಸನ್ನಿ ಡಿಯೋಲ್ ಮತ್ತು ಅಮಿಷಾ ಪಟೇಲ್ ಅಭಿನಯದ, ಈ ಗದರ್ ಚಿತ್ರ ಅಂದು ಸೂಪರ್ ಹಿಟ್ ಆಗಿತ್ತು. ಚಿತ್ರದ ಕಥೆ ಅತ್ಯದ್ಭುವಾಗಿಯೇ ಬಂದಿತ್ತು. ಭಾರತದ ಯುವಕ ಪಾಕಿಸ್ತಾನದ ಯುವತಿಯನ್ನ ಪ್ರೀತಿಸೋದೇ ಇಡೀ ಕಥೆಯ ಸಾರಾಂಶ. ಸೂಪರ್ ಡ್ಯೂಪರ್ ಆಗಿಯೇ ಸನ್ನಿ ಡಿಯೋಲ್ ಈ ಚಿತ್ರದಲ್ಲಿ ಡೈಲಾಗ್ ಹೊಡೆದು ಜನರಿಂದ ಚೆಪ್ಪಾಳೆ ಗಿಟ್ಟಿಸಿಕೊಂಡಿದ್ದರು.
ಚಿತ್ರದ ನಿರ್ದೇಶಕ ಅನಿಲ್ ಶರ್ಮಾ 20 ವರ್ಷದ ಬಳಿಕ ಗದರ್ ಪಾರ್ಟ್-2 ಚಿತ್ರ ಮಾಡೋಕೆ ಮನಸ್ಸು ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಇವರೇ ಮಾಡುತ್ತಿದ್ದಾರೆ.ಹಾಗೇನೆ ಈ ಚಿತ್ರದಲ್ಲೂ ಸನ್ನಿ ಡಿಯೋಲ್ ಹಾಗೂ ಅಮಿಷಾ ಪಟೇಲ್ ಅಭಿನಯಿಸುತ್ತಿದ್ದಾರೆ. ಕಥೆಯ ಆರಂಭ ಮತ್ತು ಅಂತ್ಯ ಹೇಗಿರುತ್ತದೆ ಅನ್ನೋ ಕುತೂಹಲದೊಂದಿಗೆ ಗದರ್-2 ಚಿತ್ರ
ಸೆಟ್ಟೇರೋ ಮುಂಚೇನೆ ಸೌಂಡ್ ಮಾಡುತ್ತಿದೆ.
PublicNext
16/10/2021 07:01 pm