ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ : ಕಿಚ್ಚನ ನ್ಯೂ ಪೋಸ್ಟರ್ ರಿಲೀಸ್

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ರಾಜ್ಯದಾದ್ಯಂತ ಕೋಟಿಗೊಬ್ಬ 3 ಸಿನಿಮಾ ರೀಲಿಜ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಇಂದು ಚಿತ್ರ ತೆರೆಕಂಡಿಲ್ಲ. ನಾಳೆ ಚಿತ್ರ ಬಿಡುಗಡೆಯಾಗಲಿದೆ.

ಹೌದು ಇಂದು ಸಿನಿಮಾದ ನಿರ್ಮಾಪಕರು, ವಿತರಕರು ಹಾಗೂ ಲ್ಯಾಬ್ ನಡುವಿನ ಹಣಕಾಸಿನ ಸಮಸ್ಯೆಯಿಂದಾಗಿ ರಾಜ್ಯದಾದ್ಯಂತ ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನ ರದ್ದಾಗಿದೆ. ಇದರಿಂದಾಗಿಯೇ ಈ ಸಿನಿಮಾ ನಾಳೆ ಬೆಳಿಗ್ಗೆ ತೆರೆ ಕಾಣಲಿದೆ. ಅದಕ್ಕಾಗಿಯೇ ಸುದೀಪ್ ಅವರು ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಆಯುಧಪೂಜೆಯಂದು ಚಿತ್ರಮಂದಿರಗಳಿಗೆ ಎಂಟ್ರಿ ಕೊಡಬೇಕಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನ ರದ್ದಾಗಿದೆ. ಸಿನಿಮಾ ಪ್ರದರ್ಶನ ಅಚಾನಕ್ಕಾಗಿ ರದ್ದಾದ ಕಾರಣದಿಂದ ಚಿತ್ರಮಂದಿರದವರು ಹಾಗೂ ಸಿನಿಪ್ರಿಯರು ಬೇಸರಗೊಂಡಿದ್ದಾರೆ. ಅದಕ್ಕಾಗಿಯೇ ಕಿಚ್ಚ ಸುದೀಪ್ ಅವರು ಚಿತ್ರತಂಡದ ಪರವಾಗಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

ಸುದೀಪ್ ಅವರು ಹೊಸ ಪೋಸ್ಟರ್ ಹಂಚಿಕೊಳ್ಳುವುದುರ ಜೊತೆಗೆ ಬದಲಾಗಿರುವ ವಿತರಕರ ಕುರಿತಾಗಿ ಮಾಹಿತಿ ಸಹ ಶೇರ್ ಮಾಡಿದ್ದಾರೆ. ಇನ್ನು ಸಿನಿಮಾ ನಾಳೆ ಬೆಳಿಗ್ಗೆ 6 ರಿಂದ ಪ್ರದರ್ಶನ ಕಾಣಲಿದೆ.

Edited By : Nirmala Aralikatti
PublicNext

PublicNext

14/10/2021 04:51 pm

Cinque Terre

64.95 K

Cinque Terre

0