ಬೆಂಗಳೂರು:ಕೋಟಿಗೊಬ್ಬ-3 ಚಿತ್ರ ರಿಲೀಸ್ ವಿಷಯ ಈಗ ಬೇರೆ ಬೇರೆ ಟರ್ನ್ ತೆಗೆದುಕೊಳ್ಳುತ್ತಿದೆ. ತಾಂತ್ರಿಕ ಕಾರಣದಿಂದಲೇ ಸಿನಿಮಾ ರಿಲೀಸ್ ಆಗಿಲ್ಲ ಅಂತಲೇ ಹೇಳಲಾಗುತ್ತಿತ್ತು.ಆದರೆ ಕೋಟಿಗೊಬ್ಬನ ರಿಲೀಸ್ ಗೆ ಷಡ್ಯಂತ್ರ ನಡೆದಿದೆ ಅನ್ನೋದು ಈಗ ಸ್ಪಷ್ಟವಾಗಿದೆ.ನಿರ್ಮಾಪಕ ಸೂರಪ್ಪ ಬಾಬು ಅದನ್ನ ಸಾರಿ,ಸಾರಿ ಹೇಳಿದ್ದಾರೆ. ನಿರ್ಮಾಪಕರ ನೋವಿನ ವೀಡಿಯೋ ಕಂಡ ಪೈಲ್ವಾನ್ ಕಿಚ್ಚ ಸುದೀಪ್, ಕಷ್ಟಕ್ಕೆ ಸಿಲುಕಿರೋ ಸೂರಪ್ಪ ಬಾಬು ಬೆನ್ನಿಗೆ ನಿಂತಿದ್ದಾರೆ. ಅದನ್ನ ವೀಡಿಯೋ ಮೂಲಕವೇ ಹೇಳಿದ್ದಾರೆ.
ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ-03 ಚಿತ್ರ ಇವತ್ತು ರಿಲೀಸ್ ಆಗಲೇ ಇಲ್ಲ.ಅದಕ್ಕೆ ಕಾರಣ ಹಲವು ಇವೆ. ಸ್ವತಃ ಸೂರಪ್ಪ ಬಾಬು ಅದನ್ನ ಹೇಳಿಕೊಂಡಿದ್ದಾರೆ. ಸೂರಪ್ಪ ಬಾಬು ಅವ್ರೇ ನಿಮ್ಮ ವೀಡಿಯೋ ನೋಡಿದೆ. ಅದನ್ನ ನೋಡಿದ್ರೆ ನಿಮ್ಮ ಕಷ್ಟ ಅರ್ಥ ಆಗುತ್ತದೆ. ಯಾರೆಲ್ಲ ಅದರ ಹಿಂದೆ ಇದ್ದಾರೆ ಅನ್ನೋದು ಗೊತ್ತಿದೆ. ನೀವೂ ಚಿಂತಿಸಬೇಡಿ. ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ. ಅಂತ ಫುಲ್ ಕಾನ್ಫಿಡನ್ಸ್ ಅನ್ನ ಸೂರಪ್ಪ ಬಾಬು ಅವರಿಗೆ ಕಿಚ್ಚ ಸುದೀಪ್ ಕೊಟ್ಟಿದ್ದಾರೆ.
ಕೋಟಿಗೊಬ್ಬ-3 ಚಿತ್ರ ರಿಲೀಸ್ ಸಂಬಂಧಿಸಿದಂತೆ,ಬೆಳಗ್ಗೆಯಿಂದಲೇ ಗೊಂದಲ್ಲ ಇತ್ತು. ಅಭಿಮಾನಿಗಳೂ ಕೂಡ ರೊಚ್ಚಿಗೆದಿದ್ದರು. ಇದನ್ನ ತಿಳಿದುಕೊಂಡಿರೋ ಕಿಚ್ಚ ಸುದೀಪ್, ಅಭಿಮಾನಿಗಳಲ್ಲಿ ಟ್ವಿಟರ್ ಪೇಜ್ ಅಲ್ಲಿ
ಪತ್ರದ ಮೂಲಕ ಕ್ಷಮೆ ಕೇಳಿದ್ದರು. ಸೂರಪ್ಪ ಬಾಬು ಅವರ ವೀಡಿಯೋ ಬಳಿಕ ಸ್ವತಃ ಸುದೀಪ್ ಒಂದ್ ವೀಡಿಯೋ ಮಾಡಿದರು. ಅದರಲ್ಲೂ ತಮ್ಮ ಅಭಿಮಾನಿ ಸ್ನೇಹಿತರಿಗೆ ಮನವಿ ಮಾಡಿಕೊಂಡ್ರು.ಎಂದಿನಂತೆ ನಾಳೆ ಬೆಳಗ್ಗೆ 6 ಗಂಟೆಗೇನೆ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ಇರುತ್ತದೆ. ನೋ ಡೌಟ್ ಸಿನಿಮಾ ಚೆನ್ನಾಗಿಯೇ ಹೋಗುತ್ತದೆ. ಜನ ಕೂಡ ಅದನ್ನ ಚೆನ್ನಾಗಿಯೇ ಸ್ವೀರಿಸುತ್ತಾರೆಂದು ಹೇಳಿದ್ದಾರೆ ಕಿಚ್ಚ ಸುದೀಪ್.
PublicNext
14/10/2021 02:49 pm