ಮುಂಬೈ: ಬಾಲಿವುಡ್ ನ ಶಿಲ್ಪಾ ಶೆಟ್ಟಿ ಪತಿ ರಾಜ ಕುಂದ್ರಾ ಬಂಧನದ ವಿಷಯವಾಗಿ ತಲ್ಲಣಗೊಂಡಿದ್ದರು. ಪತಿಯ ನೀಲಿ ಚಿತ್ರದ ನಿರ್ಮಾಣದ ಕೇಸ್ ಶಿಲ್ಪಾಶೆಟ್ಟಿಯನ್ನ ವಿಚಲಿತಗೊಳಿಸಿತ್ತು.ಆದರೆ ಈಗ ಶಿಲ್ಪಾ ಕೂಲ್ ಆಗಿದ್ದಾರೆ. ಅದೆಷ್ಟು ಕೂಲ್ ಅಂದ್ರೆ, ಮಕ್ಕಳ ಜೊತೆಗೆ ಆರಾಮಾಗಿ ದಸರಾ ಹಬ್ಬಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.
ಶಿಲ್ಪಾ ಶೆಟ್ಟಿ ಸದ್ಯಕ್ಕೆ ಸೂಪರ್ ಸೆ ಊಪರ್ ಕೂಲ್ ಆದಂತಿದೆ. ಪತಿಯ ನೀಲಿ ಚಿತ್ರದ ಕೇಸ್ ಸದ್ಯಕ್ಕೆ ಅಷ್ಟೇನೂ ಸೌಂಡ್ ಮಾಡುತ್ತಿಲ್ಲ.ಅದಕ್ಕೋ ಏನೋ ಗೊತ್ತಿಲ್ಲ. ದಸರಾ ಹಬ್ಬಕ್ಕೆ ಮನೆಯಲ್ಲಿ ಮಕ್ಕಳ ಜೊತೆಗೆ ದೇವಿ ಪೂಜೆ ನೆರವೇರಿಸಿದ್ದಾರೆ. ಪತಿ ಈ ಸಂದರ್ಭದಲ್ಲಿ ಇದ್ದರೋ ಇಲ್ವೋ ವೀಡಿಯೋದಲ್ಲಿ ಮಾತ್ರ ಎಲ್ಲೂ ಕಾಣಿಸುತ್ತಿಲ್ಲ. ಆದರೆ ಪುತ್ರನ ಜೊತೆಗೆ ಶಿಲ್ಪಾ ಶೆಟ್ಟಿ ದೇವಿಯ ಹಾಡುಗಳನ್ನ ಹಾಡುತ್ತಲೇ ಪೂಜೆ ಮಾಡಿದ್ದಾರೆ. ಹಬ್ಬಗಳನ್ನ ಆಚರಿಸೋ ಮೂಲಕ ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಅಂತ ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ. ಪೂಜೆ ಮಾಡೋ ವೀಡಿಯೋವನ್ನ ತಮ್ಮ ಇನ್ ಸ್ಟಾ ಗ್ರಾಮ್ ನಲ್ಲೂ ಶೇರ್ ಮಾಡಿದ್ದಾರೆ.
PublicNext
12/10/2021 05:33 pm