ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಹಸ ಪ್ರೇಮಿ ಅಜಯ್ ದೇವಗನ್ ಗೆ ಸವಾಲ್ ಎಸೆದ ಬೇರ್ ಗ್ರಿಲ್ಸ್

ಬಾಲಿವುಡ್ ನಾಯಕ ನಟ ಅಜಯ್ ದೇವಗನ್ ಸಾಹಸ ಪ್ರೀಯ. ಸಿನಿಮಾಗಳಲ್ಲಿ ರಿಯಲ್ ಸ್ಟಂಟ್‌ಗಳಿಗೇನೆ ಹೆಚ್ಚು ಒತ್ತುಕೊಡೋದು ಅಜಯ್ ದೇವಗನ್. ಅದಕ್ಕೆ ಸವಾಲ್ ಎಸೆಯೋ ಒಂದು ಶೋ ಅಜಯ್ ದೇವಗನ್ ಹುಡುಕಿಕೊಂಡು ಬಂದಿದೆ. ಅದುವೇ Into The Wild With Bear Grylls. ಈ ಶೋ ದಲ್ಲಿ ಎಲ್ಲವೂ ರಿಯಲ್. ದಟ್ಟ ಅರಣ್ಯದಲ್ಲಿ, ಆಳ ಸಮುದ್ರದಲ್ಲಿ ಬದುಕುಳಿಯೋ ಸಾಹಸವೇ ಈ ಶೋ. ಈ ಶೋದಲ್ಲಿ ಅಜಯ್ ಭಾರಿ ಸಾಹಸಗಳನ್ನೇ ಮಾಡಿದ್ದಾರೆ.

Into The Wild With Bear Grylls ಶೋ ನಿಜಕ್ಕೂ ವಿಶೇಷವಾದ ಶೋನೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್,ಅಕ್ಷಯ್ ಕುಮಾರ್ ಹೀಗೆ ಎಲ್ಲರೂ ಭಾಗವಹಿಸಿದ ಈ ರಿಯಲ್ ಶೋದಲ್ಲಿ, ರಿಯಲ್ ಸ್ಟಂಟ್ ಮಾಸ್ಟರ್ ಅಜಯ್ ದೇವಗನ್ ಬಂದಿದ್ದಾರೆ. ಆಳವಾದ ಸಮುದ್ರದಲ್ಲಿ ಬೇರ್ ಗ್ರಿಲ್ಸ್ ಜೊತೆಗೆ ಅಜಯ್ ಧುಮುಕಿದ್ದಾರೆ. ಹೆಲಿಕ್ಯಾಪ್ಟರ್ ಏರಿ ಸಾಹಸವನ್ನೂ ಮಾಡಿದ್ದಾರೆ. ದಟ್ಟವಾದ ಕಾಡಲ್ಲೂ ಓಡಾಡಿದ್ದಾರೆ.

ಸಾಹಸ ಪ್ರವೃತ್ತಿಯ ಅಜಯ್ ದೇವಗನ್ ಮತ್ತುಬೇರ್ ಗ್ರಿಲ್ಸ್ (Bear Grylls) ಅವರ ಈ ರೋಚಕ ಶೋ ಇದೇ ಅಕ್ಟೋಬರ್-22 ರಂದು ಬೆಳಗ್ಗೆ6 ಗಂಟೆ ಹೊತ್ತಿಗೆ ಡಿಸ್ಕವರಿ ಚಾನಲ್ ನಲ್ಲಿ ಪ್ರಸಾರ ಆಗುತ್ತಿದೆ. ಅದಕ್ಕೂ ಮೊದಲೇ ರಿಲೀಸ್ ಆದ ಶೋದ ಟೀಸರ್

ರೋಚಕತೆ ಮೂಡಿಸುತ್ತಿದೆ.

Edited By :
PublicNext

PublicNext

12/10/2021 03:48 pm

Cinque Terre

40.21 K

Cinque Terre

0