ಬೆಂಗಳೂರು: ಸ್ಯಾಂಡಲ್ ವುಡ್ ನಟ ಯಶ್ ಕೇಶ ವಿನ್ಯಾಸ ಮಾಡಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದೆ.
ಘಟಾನುಘಟಿ ಸೆಲೆಬ್ರಿಟಿಗಳಿಗೆ ಕೇಶ ವಿನ್ಯಾಸ ಮಾಡುವ ಮುಂಬೈನ ಖ್ಯಾತ ಹೇರ್ ಸ್ಟೈಲಿಸ್ಟ್ ಆಗಿರುವ ಆಲಿಮ್ ಹಕೀಮ್ ಅವರ ಸಲೂನ್ ಗೆ ಯಶ್ ಭೇಟಿ ನೀಡಿದ್ದಾರೆ. ಅಮಿತಾಭ್ ಬಚ್ಚನ್, ಸಂಜತ್ ದತ್, ಹೃತಿಕ್ ರೋಷನ್, ಹಾರ್ದಿಕ್ ಪಾಂಡ್ಯ ಮುಂತಾದ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲ್ ಮಾಡಿದ ಖ್ಯಾತಿ ಅವರಿಗೆ ಹಕೀಮ್ ದು .
ಸದ್ಯ ರಾಕೀ ಭಾಯ್ ಗೆ ಹಕೀಮ್ ಮಾಡಿರುವ ಕೇಶ ವಿನ್ಯಾಸ ಸುಪರ್ ಆಗಿದೆ ಎಂದಿದ್ದಾರೆ ಫ್ಯಾನ್ಸ್ ಈ ವೀಡಿಯೋವನ್ನು ಆಲಿಮ್ ಹಕೀಮ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಾವಿರಾರು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೀಗ ಕೆಜಿಎಫ್ 2 ಸಿನಿಮಾದಲ್ಲೂ ಯಶ್ ಅದೇ ಖಡಕ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
PublicNext
11/10/2021 06:19 pm