ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಸದ್ಯ ಎನ್ ಸಿಬಿ ಕಸ್ಟಡಿಯಲ್ಲಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಮಗನನ್ನು ಬಿಡುಗಡೆಗೊಳಿಸಲು ಅಪ್ಪ ಶಾರುಖ್ ಖಾನ್ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಭಾರಿ ಸಂಚಲನ ಸೃಷ್ಟಿಸಿದೆ.
ಹೌದು ಕೋರ್ಟ್ ಆವರಣದಲ್ಲಿ ಆರ್ಯನ್ ಖಾನ್ ನನ್ನು ಶಾರುಖ್ ಖಾನ್ ಅಪ್ಪಿಕೊಂಡು ಸಂತೈಸಿದ್ದಾರೆ ಎನ್ನುವಂತ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾರುಕ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಆದರೆ ವೈರಲ್ ಆದ ವಿಡಿಯೋ ಅಸಲಿಯತ್ತೆ ಬೇರೆ ಇದೆ. ಶಾರುಕ್ ಖಾನ್ ಹೋಲುವ ಗುಜರಾತ ಮೂಲದ ಇಬ್ರಾಹಿಂ ಖಾದಿರ್ ಎಂಬಾತ ತನ್ನ ಸ್ನೇಹಿತ ಗುಫ್ರಾನ್ ರೂಮಿ ಜೊತೆ ಸೇರಿ ಈ ವಿಡಿಯೋ ಮಾಡಿ ಅಕ್ಟೋಬರ್ 7 ರಂದು ಇಬ್ರಾಹಿಂ ಖಾದಿರ್ ತನ್ನ ಇನ್ ಸ್ಟಾ ಫೇಜ್ ನಿಂದ ಈ ವಿಡಿಯೋ ಅಪ್ ಲೋಡ್ ಆಗಿತ್ತು.
ಇನ್ನು ವೈರಲ್ ಆದ ವಿಡಿಯೋ ಶಾರುಕ್ ಖಾನ್ ನದ್ದೇ ಎಂದು ಟೀಕೆಗಳು ಹೆಚ್ಚಾಗುತ್ತಿದ್ದಂತೆ ಶಾರುಕ್ ತದ್ರೂಪಿ ಇಬ್ರಾಹಿಂ ಖಾದಿರ್ ವಿಡಿಯೋ ಟಿಲಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾನೆ.
PublicNext
09/10/2021 10:46 am