ಹೈದ್ರಾಬಾದ್: ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಹಿಂದಿನ ಕಾರಣ ಈಗ ಹೊರಬಿದ್ದಿದೆ. ಆ ಕಾರಣ ಸಹಜವೇ ಸರಿ. ಆದರೆ ಅದು ಈಗಾಗಲೇ ಈ ಜೋಡಿ ಬೇರೆ ಆಗಲು ಅತಿದೊಡ್ಡ ರೀಸನ್ ಆಗಿದೆ.
ಸಮಂತಾ ಟಾಲಿವುಡ್ ನ ಟಾಪ್ ನಟಿ.ಬಹು ಬೇಡಿಕೆ ತಾರೆ.ನಾಗಚೈತನ್ಯ ಅಷ್ಟಕಷ್ಟೆ. ಸಿನಿಮಾ ಇವೆ. ಸಕ್ಸಸ್ ಇನ್ನೂ ಮರೀಚಿಕೆ ಆಗಿದೆ. ಆದರೆ ದಾಂಪತ್ಯದಲ್ಲಿ ಚೆನ್ನಾಗಿಯೇ ಇದ್ದ ಈ ಜೋಡಿ ಡಿವೋರ್ಸ್ ಪಡೆಯಲು ಇಬ್ಬರ ನಡುವಿನ ಆ ನಿರ್ಧಾರವೇ ಕಾರಣ ಆಗಿದೆ. ಹಾ. ಅದುವೆ ಮಗು ಪಡೆಯೋ ವಿಚಾರ.ಸಮಂತಾ ಈಗಲೇ ಮಗು ಬೇಡ್ವೇ ಬೇಡ..ಕರಿಯರ್ ಸ್ವಿಂಗ್ ಅಲ್ಲಿಯೇ ಇದೆ..ಇನ್ನೂ 1 ವರ್ಷ ಹೋಗ್ಲಿ ಅಂದರಂತೆ. ನಾಗಚೈತನ್ಯ ನೋ. ನೋ. ಮಗು ಮಾಡಿಕೊಳ್ಳೋಣ ಅಂತ ಹೇಳಿದ್ರಂತೆ.
ಈ ಒಂದು ರೀಸನ್ ಆಗಿದ್ದರೇ ಹೀರೋಯಿನ್ ಅಲ್ವೇ ಸಹಜ ಬಿಡಿ ಅನ್ಬಹುದಿತ್ತು. ಆದರೆ ಸಮಂತಾಗೆ ಸಿಗ್ತೀರೋ ಸಿನಿಮಾ ಆಫರ್ ಗಳಿಂದ ನಾಗಚೈತನ್ಯ ಜಲಸ್ ಪಡ್ತಿದ್ದರು ಅನ್ನೋ ಸತ್ಯವೂ ಈಗ ಹೊರ ಬಿದ್ದಿದೆ. ಇದು ಎಷ್ಟು ಸರಿನೋ. ಇಬ್ಬರ ದಾಂಪತ್ಯ ಜೀವನ ಈಗಾಗಲೇ ಅರ್ಧಕ್ಕೆ ನಿಂತು ಹೋಗಿದೆ. ನನ್ನ ದಾರಿ ನನಗೆ. ನಿನ್ನ ದಾರಿ ನಿನಗೆ ಅಂತ ಇಬ್ಬರು ದೂರ ದೂರ ಆಗಿದ್ದಾರೆ.
PublicNext
05/10/2021 10:47 am