ಬೆಂಗಳೂರು: ಬುಡ್ ಬುಡ್ ಕೆ ಯಿಂದಲೇ ಸಿನಿಮಾ ಪ್ರಚಾರ.ಈ ಪ್ರಯೋಗವನ್ನ ಇಲ್ಲಿವರೆಗೂ ಯಾರೂ ಮಾಡಿರಲಿಲ್ಲ. ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರ ತಂಡ ಅದನ್ನ ಮಾಡಿ ಪ್ರಚಾರವನ್ನ ಹೀಗೂ ಮಾಡ್ಬಹುದು ಅಂತ ತೋರಿಸಿಕೊಟ್ಟಿದೆ.
ಸಲಗ ಚಿತ್ರ ಪಕ್ಕಾ ರಫ್ ಮೂವಿ. ಇದರ ಪ್ರಚಾರ ಕೆಲಸವೂ ಜೋರ್ ಆಗಿದೆ. ನಾಯಕ ನಿರ್ದೇಶಕ ದುನಿಯಾ ವಿಜಯ್ ಈ ಚಿತ್ರದ ಪ್ರಚಾರವನ್ನ ಅಷ್ಟೇ ಮುತವರ್ಜಿ ವಹಿಸಿಯೇ ಮಾಡ್ತಿದ್ದಾರೆ. ಅದರ ಫಲ ಈ ಬುಡ್ ಬುಡ್ ಕೆ ಪ್ರಚಾರದ ಕಾನ್ಸೆಪ್ಟ್ ಹೊರ ಬಂದಿದೆ.
ಅಕ್ಟೋಬರ್ -14 ರಂದು ಚಿತ್ರ ರಿಲೀಸ್ ಆಗುತ್ತಿದೆ. ಅದರ ಬೆನ್ನಲ್ಲಿಯೇ ಭವಿಷ್ಯ ನುಡಿಯೋ ಬುಡ್ ಬುಡ್ ಕೆಯಿಂದಲೇ ಚಿತ್ರದ ಪ್ರಚಾರ ಮಾಡಿಸೋ ಥರದ ಕಾನ್ಸೆಪ್ಟ್ ಮಾಡಿ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ವೀಡಿಯೋ ಮಾಡಿಸಿದ್ದಾರೆ. ಆ ವೀಡಿಯೋವನ್ನೂ ಶೇರ್ ಮಾಡಿದ್ದಾರೆ. ನೋಡೋರಿಗೂ ಈ ಚಿತ್ರ ಪ್ರಚಾರ ತಂತ್ರ ವಿಶೇಷವಾಗಿಯೇ ಕಾಣುತ್ತಿದೆ..
PublicNext
04/10/2021 02:31 pm