ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸೊಸೆ ಮೇಲೆ ಅನುಕಂಪ ತೋರುತ್ತಿದ್ದಾರೆ ಅಕ್ಕಿನೇನಿ ನಾಗಾರ್ಜುನ

ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಅವರಿಂ ನಟಿ ಸಮಂತಾ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಅನ್ಯೋನ್ಯವಾಗಿಯೇ ಇದ್ದ ಇವರ ಸಂಬಂಧ ಹಳಿಸಿದ್ದೇಕೆ ಎಂದು ಅವರ ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ನಾಗ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಅವರು ಟ್ವೀಟ್​ ಒಂದನ್ನು ಮಾಡಿದ್ದಾರೆ. ವಿಚ್ಛೇದನದ ನಂತರವೂ ಮಾಜಿ ಸೊಸೆ ಸಮಂತಾ ಬಗ್ಗೆ ನಾಗಾರ್ಜುನ ಪ್ರೀತಿ ತೋರಿದ್ದಾರೆ.

‘ಬಹಳ ಬೇಸರದಿಂದ ಇದನ್ನು ಹೇಳುತ್ತಿದ್ದೇನೆ. ಸಮಂತಾ ಮತ್ತು ನಾಗ ಚೈತನ್ಯ ನಡುವೆ ನಡೆದಿರುವುದು ನಿಜಕ್ಕೂ ಬೇಸರದ ವಿಚಾರ. ಪತಿ ಮತ್ತು ಪತ್ನಿ ನಡುವೆ ಏನು ನಡೆದಿದೆ ಅನ್ನೋದು ತುಂಬಾನೇ ಖಾಸಗಿಯಾದುದ್ದು. ಸ್ಯಾಮ್​ ಮತ್ತು ಚಾಯ್​ ನನಗೆ ತುಂಬಾನೇ ಹತ್ತಿರವಾಗಿದ್ದಾರೆ. ಸಮಂತಾ ಜತೆ ಕಳೆದ ಕ್ಷಣಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಸಮಂತಾ ಯವಾಗಲೂ ನನಗೆ ಪ್ರೀತಿಪಾತ್ರಳು. ಇಬ್ಬರಿಗೂ ದೇವರು ಆಶೀರ್ವಾದ ಮಾಡಲಿ’ ಎಂದು ನಾಗಾರ್ಜುನ ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

03/10/2021 09:14 am

Cinque Terre

57.44 K

Cinque Terre

0