'ರಾಗ' ಸಿನಿಮಾದಲ್ಲಿ ನಾಯಕ ನಟರಾಗಿಯೂ ನಟಿಸಿದ್ದ ನಟ ಮಿತ್ರ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು, ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಿತ್ರ, ನಾನೊಬ್ಬ ಹೀರೋ ಅಲ್ಲ ನಾನೊಬ್ಬ ಕಲಾವಿದ ಅಷ್ಟೆ, ನನಗೆ ಹೊಂದುವ ಯಾವುದೇ ಪಾತ್ರ ನೀಡಿದರೂ ಮಾಡುವೆ ಅದು ಭಿಕ್ಷುಕನ ಪಾತ್ರವಾದರೂ ಸರಿ ನಟಿಸುವೆ ಪಾತ್ರ ನೀಡಿ ಅಷ್ಟೆ ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಅವಕಾಶಗಳು ಕಡಿಮೆ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು ನಟ ಮಿತ್ರ, ನನಗೆ ಮಾತ್ರವಲ್ಲ 300-400 ಸಿನಿಮಾಗಳಲ್ಲಿ ನಟಿಸಿರುವ ನಟರು ಇದ್ದಾರೆ, ಡಾ.ರಾಜ್‌ಕುಮಾರ್ ಜೊತೆ ನಟಿಸಿರುವ ಅದ್ಭುತ ಕಲಾವಿದರು ನಮ್ಮಲ್ಲಿದ್ದಾರೆ ಅವರಿಗೆ ಅವಕಾಶ ನೀಡಿ. ಸಂಭಾವನೆ ಕಡಿಮೆ ಆದರೂ ಪರವಾಗಿಲ್ಲ, ಅವರನ್ನು ಗುರುತಿಸಿ, ಪ್ರೀತಿಯಿಂದ ಮಾತನಾಡಿಸಿ ಒಂದು ಪಾತ್ರ ನೀಡಿ ಎಂದು ಮಿತ್ರ ಮನವಿ ಮಾಡಿದ್ದಾರೆ.
PublicNext
27/09/2021 03:42 pm