ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಣು ಬಿಡದ ನಟ ಧರಮ್ ತೇಜ್ : ಅಳಿಯನ ಬಗ್ಗೆ ಮಾವ ಪವನ್ ಕಲ್ಯಾಣ್ ಹೇಳಿದ್ದೇನು?..

ಹೈದರಾಬಾದ್: ಗಣೇಶ ಹಬ್ಬದ ದಿನವೇ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ತೆಲುಗು ನಟ ಸಾಯಿ ಧರಮ್ ತೇಜ್ ಗೆ ಚಿಕಿತ್ಸೆ ಮುಂದುವರಿದಿದೆ. ಆದರೆ ಇದುವರೆಗೂ ಕಣ್ಣು ಬಿಟ್ಟಿಲ್ಲ. ಸದ್ಯ ಅಳಿಯನ ಬಗ್ಗೆ ಅವರ ಸೋದರಮಾವ ಹಾಗೂ ಸೂಪರ್ ಸ್ಟಾರ್ ಪವನ್ ಕಲ್ಯಾಣ್, ಧರಮ್ ತೇಜ್ ಪ್ರಸ್ತುತ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.

ಧರಮ್ ತೇಜ್ ಈಗಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಿಲ್ಲ. ಇನ್ನೊಂದೆಡೆ ಧರಮ್ ತೇಜ್ ಅಭಿನಯದ “ರಿಪಬ್ಲಿಕ್” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 1ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಧರಮ್ ತೇಜ್ ಆರೋಗ್ಯದ ಸ್ಥಿತಿಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ಧರಮ್ ತೇಜ್ ಇನ್ನು ಬೆಡ್ ಮೇಲೆಯೇ ಇದ್ದು, ಈವರೆಗೂ ಕಣ್ಣನ್ನು ಕೂಡ ತೆರೆದಿಲ್ಲ ಎಂದರು.

ಅಭಿಮಾನಿಗಳ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖವಾಗಲಿದ್ದು, ಶೀಘ್ರವೇ ಮನೆಗೆ ಮರಳಲಿದ್ದಾನೆಂದು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

26/09/2021 06:29 pm

Cinque Terre

35.36 K

Cinque Terre

1