'ಮಾದೇವ' ಹಾಡಿನ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದ ಅನನ್ಯಾ ಭಟ್ ಈಗ ಕನ್ನಡದ ಬೇಡಿಕೆಯ ಗಾಯಕಿ. ಸಂಗೀತ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವಾಗಲೇ ಅನನ್ಯಾ ಭಟ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಅನನ್ಯಾ ಭಟ್ 'ಸೇನಾಪುರ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಟ್ರೇಲರ್ ಇಂದು (ಸೆಪ್ಟೆಂಬರ್ 24)ಕ್ಕೆ ಬಿಡುಗಡೆ ಆಗಿದೆ. ಈ ಸಿನಿಮಾವು ಸತ್ಯ ಘಟನೆಗಳ ಮೇಲೆ ಆಧಾರಿತವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಬಿಸಿಲು ನಾಡು ಬಳ್ಳಾರಿಯ ಗಣಿ ಒಡಲಲ್ಲಿ ನಡೆದಿದ್ದ ವಿದ್ಯಾಮಾನಗಳ ಸುತ್ತ ನಡೆದಂತ ಒಂದಷ್ಟು ನೈಜ ಅಂಶಗಳನ್ನು 'ಸೇನಾಪುರ' ಚಿತ್ರದಲ್ಲಿ ಬಳಸಲಾಗಿದೆ. ಕತೆ ಬರೆದು ನಿರ್ದೇಶನ ಮಾಡಿರುವುದು ಕುಂದಾಪುರ ಗುರುಸಾವನ್. ಇವರಿಗೆ ಇದು ಮೊದಲ ಸಿನಿಮಾ ಆಗಿದೆ.
PublicNext
25/09/2021 09:17 am