ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡ ಸಿನಿಮಾ ಮಾಡುವಷ್ಟು ಸಮಯ ಇಲ್ಲ ಎಂದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ವೃತ್ತಿಜೀವನ ಆರಂಭಿಸಿದ್ದು ಕನ್ನಡ ಚಿತ್ರರಂಗದಿಂದ. ಅವರಿಗೆ ಮೊಟ್ಟ ಮೊದಲ ಅವಕಾಶ ಸಿಕ್ಕಿದ್ದು ‘ಕಿರಿಕ್​ ಪಾರ್ಟಿ’ ಚಿತ್ರದಲ್ಲಿ. ಆ ಸಿನಿಮಾದ ಯಶಸ್ಸಿನ ಬಳಿಕ ರಶ್ಮಿಕಾ ರಾತ್ರೋರಾತ್ರಿ ಸ್ಟಾರ್​ ಆಗಿಬಿಟ್ಟರು. ಆದರೆ ಈಗ ಅವರು ಕನ್ನಡ ಸಿನಿಮಾ ಮಾಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಇತ್ತೀಚೆಗಂತೂ ಅವರು ಯಾವುದೇ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

ಇದು ಹೀಗೇಕೆ ನಿಮ್ಮ ನಿರ್ಧಾರ? ಎಂಬ ಪ್ರಶ್ನೆಗೆ ಈ ಹಾಲುಗೆನ್ನೆ ಸುಂದರಿ ನೇರವಾಗಿ ಉತ್ತರ ನೀಡಿದ್ದಾರೆ. ಕನ್ನಡ ಸಿನಿಮಾ ಮಾಡುವಷ್ಟು ಸಮಯ ಅವರ ಬಳಿ ಇಲ್ಲವಂತೆ. ಯಾಕೆಂದರೆ ರಶ್ಮಿಕಾ ಪರಭಾಷೆ ಸಿನಿಮಾಗಳಲ್ಲಿ ವರ್ಷಪೂರ್ತಿ ಬ್ಯುಸಿ ಆಗಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಮಾತನಾಡಿದ್ದಾರೆ. ತೆಲುಗು ಮತ್ತು ಹಿಂದಿ ಸಿನಿಮಾಗಳಿಗಾಗಿ ಡೇಟ್ಸ್​ ಹೊಂದಿಸಲು ಅವರಿಗೆ ತುಂಬ ಕಷ್ಟ ಆಗುತ್ತಿದೆ. ಈ ಪ್ರಾಜೆಕ್ಟ್​ಗಳಿಗಾಗಿಯೇ ಅವರು ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಜೊತೆಗೆ ತಮಿಳು ಸಿನಿಮಾ ಕೂಡ ಮಾಡುತ್ತಿದ್ದಾರೆ. ಇದರ ನಡುವೆ ತಾವು ಕನ್ನಡ ಸಿನಿಮಾವನ್ನೂ ಮಾಡಿದರೆ ವರ್ಷದ 365 ದಿನವೂ ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

21/09/2021 10:46 pm

Cinque Terre

70.92 K

Cinque Terre

17