ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಯಜಮಾನನ ಹುಟ್ಟು ಹಬ್ಬಕ್ಕೆ 101 ಕೆಜಿ ಕೇಕ್ ಕತ್ತರಿಸಿದ ಅಭಿಮಾನಿ

ಚಿತ್ರದುರ್ಗ : ಡಾ. ಸಾಹಸ ಸಿಂಹ ವಿಷ್ಣುವರ್ಧನ್ ಅವರ 71 ನೇ ಜನ್ಮದಿನದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಅಭಿಮಾನಿಯೊಬ್ಬ 101 ಕೆಜಿ ಕೇಕ್ ಕತ್ತರಿಸಿ ಡಾ. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದಾನೆ. ಹಿರಿಯೂರಿನಲ್ಲಿ ಜೂನಿಯರ್ ವಿಷ್ಣುವರ್ಧನ್ ಎಂದೇ ಕರೆಸಿಕೊಳ್ಳುವ ರಿಯಾಜ್ ವಿಷ್ಣುವರ್ಧನ್ ಅವರ ಕಟ್ಟ ಅಭಿಮಾನಿಯಾಗಿದ್ದು ಪ್ರತಿವರ್ಷ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

100 ಕೆಜಿ ಕೇಕ್ ತಯಾರಿಸಿ ಅದರಲ್ಲಿ 30 ಕೆಜಿ ಚಿತ್ರದುರ್ಗ ನಗರದ ಅಭಿಮಾನಿಗಳಿಗೆ ಕಳಿಸಿದ್ದು, ಉಳಿದ 71 ಕೆಜಿ ಕೇಕ್ ಹಿರಿಯೂರಿನಲ್ಲಿ ಕತ್ತರಿಸಿ ಹಂಚಲಾಗಿದೆ. ರಿಯಾಜ್ ಚಿಕ್ಕದಾದ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದು. ಇವರಿಗೆ ವಿಷ್ಣುವರ್ಧನ್ ಅಂದರೆ ತುಂಬಾ ಪ್ರೀತಿ, ಅವರು ಅಭಿನಯಿಸಿರುವ ಹಲವಾರು ಚಿತ್ರಗಳನ್ನು ರಿಯಾಜ್ ವೀಕ್ಷಿಸಿದ್ದಾರೆ. ರಿಯಾಜ್ ಅವರು ಹಲವಾರು ಬಾರಿ ವಿಷ್ಣುವರ್ಧನ್ ಅವರನ್ನು ಭೇಟಿಯಾಗಿ ಬಂದಿರುವುದಾಗಿ ತಿಳಿಸಿದರು.

ಸಾಹಸ ಸಿಂಹನ ಹುಟ್ಟು ಹಬ್ಬವನ್ನು ಇಂದು ತನ್ನ ಚಿಕ್ಕ ಹೋಟೆಲ್ ನಲ್ಲಿ ಬಾಳೆ ಕಂದು, ಶಾಮಿಯಾನ, ಅಲಂಕಾರದೊಂದಿಗೆ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ದಾದಾನ ಹಲವಾರು ಅಭಿಮಾನಿಗಳು ಜೂನಿಯರ್ ವಿಷ್ಣುವರ್ಧನ್ ಅವರೊಂದಿಗೆ ಸೇಲ್ಪೀ ತೆಗೆದುಕೊಳ್ಳಲು ಮುಗಿಬಿದ್ದರು. ರಿಯಾಜ್ ಕುಟುಂಬದವರು ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.

Edited By : Manjunath H D
PublicNext

PublicNext

18/09/2021 08:46 pm

Cinque Terre

85.09 K

Cinque Terre

1