ಬೆಂಗಳೂರು: ನಟಿ ವಿಜಯಲಕ್ಷ್ಮಿ ಇದೀಗ ವಿಪರೀತ ಅನಾರೋಗ್ಯದಿಂದ ಬಳಲುತ್ತಿದ್ದು, ನಾನು ಉಳಿಯುವಂತೆ ಕಾಣುತ್ತಿಲ್ಲ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.
'ನನಗೆ ಕೊರೊನಾ ನ್ಯುಮೋನಿಯಾ ಅಟ್ಯಾಕ್ ಆಗಿದೆ. ಐದು ದಿನಗಳಿಂದ ತುಂಬಾ ನರಳುತ್ತಿದ್ದೇನೆ. ಸಿಕ್ಕಾಪಟ್ಟೆ ವಾಂತಿಯಾಗುತ್ತಿದೆ. ಸಿಕ್ಕಾಪಟ್ಟೆ ಜ್ವರ ಬಂದಿದೆ. ಈಗ ತುಂಬಾ ಶ್ರಮವಹಿಸಿ ಕಷ್ಟಪಟ್ಟು ಆಸ್ಪತ್ರೆಗೆ ಬಂದಿದ್ದೇನೆ. ನಾನು ಕೋವಿಡ್ ಸೆಂಟರ್ಗೆ ಹೋಗಲೇಬೇಕಿದೆ. ಈ ಬಗ್ಗೆ ಕಲಾವಿದರ ಸಂಘಕ್ಕೆ ಮನವಿ ಮಾಡಿದ್ದೇನೆ. ನಾನು ಅನೇಕರನ್ನು ಸಂಪರ್ಕಿಸಿದ್ದೇನೆ. ಆದರೆ ಏನೂ ಪ್ರಯೋಜನ ಆಗುತ್ತಿಲ್ಲ. ಐದು ದಿನಗಳಿಂದ ಊಟ ಸರಿಯಾಗಿ ಸಿಗದ ಪರಿಸ್ಥಿತಿ ಉಂಟಾಗಿದೆ. ಹೆಚ್ಚು ದಿನ ನಾನು ಉಳಿಯುವುದಿಲ್ಲ' ಎಂದು ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.
PublicNext
16/09/2021 08:53 pm