ಬೆಂಗಳೂರು: ನಟಿ ಮಯೂರಿ ಅಮ್ಮನಾಗಿರುವ ಸಂಭ್ರಮದಲ್ಲಿದ್ದಾರೆ. ಸದ್ಯ ತಮ್ಮ ಆರು ತಿಂಗಳ ಮಗನ ಹುಟ್ಟುಹಬ್ಬ ಆಚರಣೆ ವಿಡಿಯೋ ಅನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಒಳ್ಳೆಯದರೊಂದಿಗೆ ಒಳ್ಳೆಯ ಕೊನೆಗೊಳ್ಳುತ್ತದೆ. ಆರವ್ ಗೆ 6 ತಿಂಗಳು ಎಂದು ಬರೆದುಕೊಂಡಿರುವ ಮಯೂರಿ ಮಗ ಹಾಗೂ ಗಂಡನ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಮಯೂರಿ ಅವರ ಅಭಿಮಾನಿಗಳಿಗೆ ಸಕತ್ ಖುಷಿ ಕೊಡುತ್ತಿದೆ.
ಬಾಲ್ಯದ ಗೆಳೆಯ ಅರುಣ್ ಅವರನ್ನು ಮಯೂರಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಮದುವೆಯಾಗಿದ್ದಾರೆ. ನಂತರ ಆರವ್ ನ ಅಮ್ಮನಾದ ಮಯೂರಿ, ಆರನೇ ತಿಂಗಳ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ.
PublicNext
16/09/2021 12:25 pm