ನಟ ಹೃತಿಕ್ ರೋಷನ್ ಅವರು ಬಾಡಿಗೆ ಮನೆಯಲ್ಲಿ ಇದ್ದಾರಂತೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅವರು ಬಾಡಿಗೆ ಮನೆಯಲ್ಲಿದ್ದಾರಂತೆ. ಒಂದು ಸಿನಿಮಾಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುವ ಅವರು ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಇದ್ದಾರೆ ನಂಬುವುದು ಕಷ್ಟ, ಅಲ್ಲವೇ!
ನಟ ಹೃತಿಕ್ ರೋಷನ್ಇತ್ತೀಚೆಗೆ ಫೋಟೋವೊಂದನ್ನು ಹಂಚಿಕೊಂಡಿದ್ದರು, ಆ ಫೋಟೋದಲ್ಲಿರುವ ಅವರ ಅಪಾರ್ಟ್ ಮೆಂಟ್ ಗೋಡೆ ಹಾಳಾಗಿರುವುದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ತಾಯಿ ಪಿಂಕಿ ರೋಷನ್ ಜೊತೆ ಹೃತಿಕ್ ಬೆಳಗ್ಗಿನ ತಿಂಡಿ ಸೇವನೆ ಮಾಡಿದ್ದರು, ಆ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಫೋಟೋದಲ್ಲಿ ಗೋಡೆ ಒದ್ದೆ ಆಗಿರೋದು ಅಭಿಮಾನಿಗಗಳ ಕಣ್ಣಿಗೆ ಬಿದ್ದಿದೆ.
"ಸರಿಯಾಗಿ ನೋಡಿ, ಗೋಡೆ ಒದ್ದೆ ಆಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಹೃತಿಕ್ ರೋಷನ್ ಕಾಮೆಂಟ್ ಮಾಡಿದ್ದು, "ಈಗ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದೇವೆ, ಶೀಘ್ರದಲ್ಲಿ ಹೊಸ ಮನೆ ಖರೀದಿ ಮಾಡುತ್ತೇನೆ" ಎಂದು ಹೇಳಿದ್ದಾರೆ. ಮುಂಬೈನ ಜುಹುದಲ್ಲಿರುವ ಅಪಾರ್ಟ್ಮೆಂಟ್ಗೆ ಪ್ರತಿ ತಿಂಗಳು 8.2 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಾರಂತೆ. ಅಷ್ಟೇ ಅಲ್ಲದೆ ಕಳೆದ ಅಕ್ಟೋಬರ್ ನಲ್ಲಿ ಹೃತಿಕ್ ಅವರು ಮುಂಬೈನಲ್ಲಿ 97.5 ಕೋಟಿ ರೂಪಾಯಿಯ ಅಪಾರ್ಟ್ ಮೆಂಟ್ ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಸದ್ಯ ಕ್ರಿಷ್ 4 ಸಿನಿಮಾ ಅನೌನ್ಸ್ ಆಗಿದೆ. ಈಗಾಗಲೇ ಕ್ರಿಷ್ ಸಿನಿಮಾ ಸರಣಿಗಳು ಸೂಪರ್ ಹಿಟ್ ಆಗಿತ್ತು.
PublicNext
16/09/2021 11:54 am