ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಮೊದಲಿನಿಂದಲೂ ದೇವರ ಬಗ್ಗೆ ಅಪಾರ ಭಕ್ತಿ, ಶೃದ್ಧೆ ಹೊಂದಿದ್ದಾರೆ. ಅವರು ಆಂಜನೇಯನ ಪರಮ ಭಕ್ತೆ ಕೂಡ ಹೌದು. ಹಾಗಾಗಿ, ತಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಆಂಜನೇಯನ ಸ್ಮರಣೆ ಮಾಡ್ತಾರೆ ಬುಲ್ ಬುಲ್ ಬೆಡಗಿ. ಇದೀಗ, ಮೇಲುಕೋಟೆಗೆ ಭೇಟಿ ನೀಡಿರುವ ರಚಿತಾ ರಾಮ್ ಮನೆ ದೇವರ ದರ್ಶನ ಪಡೆದುಕೊಂಡಿದ್ದಾರೆ.
ಭಾನುವಾರ ಮೇಲುಕೋಟೆಯ ಚೆಲುವರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ದೇವರ ಆಶೀರ್ವಾದ ಪಡೆದಿರುವ ನಟಿ, ಹಣೆಯ ಮೇಲೆ ನಾಮಧರಿಸಿರುವ ಫೋಟೋ ಮತ್ತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಚ್ಚು ಶೇರ್ ಮಾಡಿರುವ ಈ ವಿಡಿಯೋಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
PublicNext
14/09/2021 07:39 am