ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ಷಯ್​ ಕುಮಾರ್‌ಗೆ ಮಾತೃವಿಯೋಗ

ಮುಂಬೈ: ಬಾಲಿವುಡ್​ ನಟ ಅಕ್ಷಯ್ ಕುಮಾರ್​ ಅವರ ತಾಯಿ ಅರುಣಾ ಭಾಟಿಯಾ (77) ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಈ ವಿಷಯವನ್ನು ಅಕ್ಷಯ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಅಮ್ಮ ನನ್ನ ಜೀವನ ಮುಖ್ಯ ಭಾಗವಾಗಿದ್ದರು. ನನಗೆ ಉಸಿರು ತೆಗೆದುಕೊಳ್ಳಲಾಗದಷ್ಟು ನೋವಿದೆ. ಇಂದು ಬೆಳಿಗ್ಗೆ ನನ್ನ ಅಮ್ಮ ಅರುಣಾ ಭಾಟಿಯಾ ಈ ಲೋಕವನ್ನು ತ್ಯಜಿಸಿದ್ದು, ಬೇರೆ ಲೋಕದಲ್ಲಿರುವ ನನ್ನ ತಂದೆಯ ಜೊತೆ ಸೇರಿಕೊಂಡಿದ್ದಾರೆ" ಎಂದು ಅಕ್ಷಯ್​ ಕುಮಾರ್​ ನೋವಿನಿಂದ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಅರುಣಾ ಭಾಟಿಯಾ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅರುಣಾ ಭಾಟಿಯಾ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದ ಕಾರಣದಿಂದ ಅವರನ್ನು ತೀವ್ರ ನಿಗಾಘಟಕದಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದಗೆ ಅರುಣಾ ಅವರು ಸಾವನ್ನಪ್ಪಿದ್ದಾರೆ.

Edited By : Vijay Kumar
PublicNext

PublicNext

08/09/2021 11:07 am

Cinque Terre

72.23 K

Cinque Terre

17