2007ರಲ್ಲಿ ‘ಚೊಟ್ಟಾ ಮುಂಬೈ’ ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸುವ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟು, ನಂತರ ಕಾಲಿವುಡ್, ಟಾಲಿವುಡ್ ಸಿನಿಮಾಗಳಿಂದ ಆಫರ್ ಗಳನ್ನು ಪಡೆದುಕೊಂಡ ಅನಿಕಾ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಾ ಬಂದಿದ್ದಾರೆ.ಈವರೆಗೆ ಅನಿಕಾ ಸುರೇಂದ್ರನ್ ಸುಮಾರು 17ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲ ನಟಿಯಾಗಿ ಹೆಚ್ಚಿನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
19 ವರ್ಷದ ಅನಿಖಾ ಸುರೆಂದ್ರನ್ ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ಸೆಶ್ಶನ್ ನಡೆಸಿದ್ದಾರೆ. ಇದನ್ನು ಗಮನಿಸಿ ಅನೇಕರು ಅವರೊಂದಿಗೆ ಪ್ರಶ್ನೆಗಳು ಕೇಳಲು ಮುಂದಾಗಿದ್ದಾರೆ. ಅನಿಖಾ ಸುರೇಂದ್ರನ್ ‘ಆಸ್ಕ್ಎನಿಥಿಂಗ್ ಸೆಶ್ಶನ್’ ಆರಂಭಿಸಿದರು. ಸಾಕಷ್ಟು ಅಭಿಮಾನಿಗಳು ಅವರೊಂದಿಗೆ ಒಂದಾದ ಮೇಲೊಂದು ಪ್ರಶ್ನೆಯನ್ನು ಕೇಳುತ್ತಾ ಬಂದಿದ್ದಾರೆ. ಅದರಂತೆ ಒಬ್ಬರು ‘ನನಗೆ ಬ್ರಾ ಬಗ್ಗೆ ಸಲಹೆ ಅಗತ್ಯವಿದೆ. ನೀವು ಯಾವುದನ್ನು ಬಳಸುತ್ತೀರಿ? ಧನ್ಯವಾದಗಳು’ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಪ್ರಶ್ನೆಗಳು ಗಮನಿಸಿದ ಅನಿಖಾ ಯಾವುದೇ ಮುಜುಗರಕ್ಕೆ ಒಳಗಾಗದೆ ‘‘ಸರಿಯಾದ ರೀತಿಯ ಹತ್ತಿಯ ಬ್ರಾ ಧರಿಸಲು ಸಲಹೆ ನೀಡುತ್ತೇನೆ. ಪ್ರಾಮಾಣಿಕವಾಗಿ ಅದು ವಿಚಿತ್ರವಾಗಿ ಕಾಣುತ್ತದೆ ನಾನು ಆನನ್ ಲೈನ್ ಮೂಲಕ ಬ್ರಾ ಖರೀದಿಸುತ್ತೇನೆ’ ಎಂದು ಉತ್ತರಿಸಿದ್ದಾರೆ. ಅನೇಕ ತಾರೆಯರಿಗೆ ಲೈವ್ ವೇಳೆ ಇಂತಹ ಪ್ರಶ್ನೆಗಳು ಕೇಳಿ ಕೋಪಿಸಿಕೊಂಡು ಮುಟ್ಟಿನೋಡಿಕೊಳ್ಳುವಂತೆ ಉತ್ತರವನ್ನು ನೀಡಿದ ಅನೇಕ ಉದಾಹರಣೆಗಳಿವೆ . ಆದರೆ ಅನಿಖಾ ಅಭಿಮಾನಿಯ ಪ್ರಶ್ನೆಗೆ ಸಿಟ್ಟು ಮಾಡಿಕೊಳ್ಳದೆ ನಿಧಾನವಾಗಿ ಉತ್ತರಿಸಿದ್ದಾರೆ.
PublicNext
04/09/2021 09:49 am