ಮುಂಬೈ: 'ಬಿಗ್ ಬಾಸ್ 13' ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿರುವುದು ಬಾಲಿವುಡ್ ಗೆ ಬರ ಸಿಡಿಲು ಬಡಿದಂತಾಗಿದೆ. ಸಾವಿನ ಸುದ್ದಿ ಸುದ್ದಿ ಕೇಳಿ ಬಾಲಿವುಡ್ ದಿಗ್ಭ್ರಮೆಗೊಂಡಿದೆ. ಅನೇಕ ಬಾಲಿವುಡ್ ನಟ, ನಟಿಯರು ಟ್ವೀಟ್ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
ಅಂದು ಸಿದ್ಧಾರ್ಥ್ ಕೈ ಮೇಲೆತ್ತಿ ವಿನ್ನರ್ ಎಂದು ಘೋಷಿಸಿದ್ದ ಸಲ್ಮಾನ್ ಖಾನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಸಲ್ಮಾನ್ ಖಾನ್
''ಬೇಗ ಹೊರಟು ಹೋದಿರಿ.. ನಿಮ್ಮನ್ನ ಖಂಡಿತ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ''
ಅಕ್ಷಯ್ ಕುಮಾರ್
''ಸಿದ್ದಾರ್ಥ್ ಶುಕ್ಲಾ ಅವರ ನಿಧನ ವಾರ್ತೆ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಸಿದ್ದಾರ್ಥ್ ಶುಕ್ಲಾ ಬಗ್ಗೆ ವೈಯುಕ್ತಿಕವಾಗಿ ನನಗೆ ಗೊತ್ತಿಲ್ಲ. ಆದರೆ, ಪ್ರತಿಭಾವಂತರು ಇಷ್ಟು ಬೇಗ ಬಾರದ ಲೋಕಕ್ಕೆ ತೆರಳುವುದು ದುರಾದೃಷ್ಟಕರ. ಓಂ ಶಾಂತಿ''
ಮನೋಜ್ ಬಾಜ್ಪೇಯಿ
''ಶಾಕಿಂಗ್.. ನನಗೆ ಆಗಿರುವ ಆಘಾತವನ್ನು ನಾನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ''
ದಿಯಾ ಮಿರ್ಜಾ
''ಸಿದ್ದಾರ್ಥ್ ಶುಕ್ಲಾ ಅಕಾಲಿಕ ಮರಣದಿಂದ ಆಘಾತ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ''
ಅಜಯ್ ದೇವ್ಗನ್
''ಜೀವನ ಮತ್ತು ಸಾವು.. ಎರಡೂ ಗೊಂದಲಮಯ. ಸಿದ್ದಾರ್ಥ್ ಶುಕ್ಲಾರಷ್ಟು ಚಿಕ್ಕವರು ಹಠಾತ್ತನೆ ನಿಧನರಾದಾಗ ಖಂಡಿತ ದುಃಖ ಉಂಟಾಗುತ್ತದೆ. ಸಿದ್ದಾರ್ಥ್ ಶುಕ್ಲಾ ಅವರ ಕುಟುಂಬಕ್ಕೆ ನನ್ನ ಸಂತಾಪಗಳು''
ಪರಿಣಿತಿ ಚೋಪ್ರಾ
''ಈ ಸುದ್ದಿಯನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಸಿದ್ದಾರ್ಥ್ ಶುಕ್ಲಾ.. ನಿಮ್ಮನ್ನ ನಿಜಕ್ಕೂ ಲಕ್ಷಾಂತರ ಮಂದಿ ಪ್ರೀತಿಸುತ್ತಿದ್ದರು''
ಕಿಯಾರಾ ಅಡ್ವಾಣಿ
''ಸಿದ್ದಾರ್ಥ್ ಶುಕ್ಲಾ ಅವರ ನಿಧನವಾರ್ತೆ ಕೇಳಿ ನನ್ನ ಹೃದಯ ಛಿದ್ರಗೊಂಡಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ಹಾಗೂ ಪ್ರೀತಿ ಪಾತ್ರರಿಗೆ ನನ್ನ ಸಂತಾಪಗಳು''
ಸುನೀಲ್ ಶೆಟ್ಟಿ
''ಈ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿದ್ದೇನೆ. ಇವರದ್ದು ಸಾಯುವ ವಯಸ್ಸು ಅಲ್ಲವೇ ಅಲ್ಲ. ಅವರ ಕುಟುಂಬ ನೋವು ಭರಿಸುವ ಶಕ್ತಿ ಆ ದೇವರು ನೀಡಲಿ''
ಎಂದಿದ್ದಾರೆ.
PublicNext
02/09/2021 05:01 pm