ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ಧಾರ್ಥ್ ಶುಕ್ಲಾ ಕ್ರಿಕೆಟ್‌ನ ದೊಡ್ಡ ಅಭಿಮಾನಿ.!

ಮುಂಬೈ: ತನ್ನ ನಟನೆಯಿಂದ ಜನರ ಹೃದಯದಲ್ಲಿ ಮನೆ ಮಾಡಿದ್ದ ಸಿದ್ಧಾರ್ಥ್ ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾಗಿದ್ದರು ಎಂದು ಕೆಲವೇ ಜನರಿಗೆ ಮಾತ್ರ ತಿಳಿದಿದೆ.

ಸಿದ್ಧಾರ್ಥ್ ಶುಕ್ಲಾ ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲ ಅವರು ಆಗಾಗ್ಗೆ ಕ್ರಿಕೆಟ್‌ ಆಡುತ್ತಿದ್ದರು. ಇದಲ್ಲದೇ ಅನೇಕ ಸಂದರ್ಶನಗಳಲ್ಲಿ ಸಿದ್ಧಾರ್ಥ್ ಶುಕ್ಲಾ ತನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದರು.

ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

ಮುಂಬೈನಲ್ಲಿ 1980ರ ಡಿಸೆಂಬರ್ 12ರಂದು ಜನಿಸಿದ ಸಿದ್ಧಾರ್ಥ್ ಶುಕ್ಲಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮಾಡೆಲಿಂಗ್ ಆಗಿದ್ದರು. 2004ರಲ್ಲಿ ನಟನಾ ಜಗತ್ತಿಗೆ ಪದಾರ್ಪಣೆ ಮಾಡಿದ್ದರು. 2008ರಲ್ಲಿ 'ಬಾಬುಲ್ ಕಾ ಆಂಗನ್ ಛೋಟೆ ನಾ' ಎಂಬ ಟಿವಿ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಬಾಲಿಕಾ ವಧುವಿನ ಶಿವನ ಪಾತ್ರದಿಂದ ಸಿದ್ಧಾರ್ಥ್ ಅವರ ನಟನೆಗೆ ನಿಜವಾದ ಮನ್ನಣೆ ಸಿಕ್ಕಿತು. ಈ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಸಿದ್ಧಾರ್ಥ್ ಶುಕ್ಲಾ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರು. ಅವರು ಬಿಗ್ ಬಾಸ್ 13, 'ಖತ್ರೋನ್ ಕೆ ಖಿಲಾಡಿ' ಮತ್ತು 'ಜಲಕ್ ದಿಖ್ಲಾಜಾ' ಕಾರ್ಯಕ್ರಮಗಳ ವಿಜೇತರಾಗಿ ಹೊರಹೊಮ್ಮಿದ್ದರು.

Edited By : Vijay Kumar
PublicNext

PublicNext

02/09/2021 03:09 pm

Cinque Terre

37.45 K

Cinque Terre

0