ಮುಂಬೈ: ಸದಾ ತುಂಡುಡುಗೆ ಧರಿಸುತ್ತಲೇ ಪ್ರಸಿದ್ಧಿ ಪಡೆದಿರುವ ಮಲ್ಲಿಕಾ ಶೆರಾವತ್ ತುಂಡುಡುಗೆ ತೊಡುವು ಮೂಲಕ ಪ್ರಸಿದ್ದಿ ಪಡೆದ ನಟಿ. ಸದ್ಯ ಇವರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಯಲ್ಲಿ ನಟಿಯನ್ನು ಕಂಡ ನೆಟ್ಟಿಗರು ಭಾರಿ ಟ್ರೋಲ್ ಮಾಡುತ್ತಿದ್ದಾರೆ.
ಅಷ್ಟಕ್ಕೂ ಆ ಸೀರೆಯ ವಿಶೇಷತೆ ಏನು ಎಂದರೆ, ದೂರದಿಂದ ನೋಡಿದರೆ ಸೀರೆಯ ರೂಪದಲ್ಲಿ ಇದ್ದರೂ ಕೆಳಭಾಗದಲ್ಲಿ ಕಾಲಿನ ಸಂಪೂರ್ಣ ಪ್ರದರ್ಶನ ಮಾಡಿದ್ದಾರೆ. ಇದು ಸೀರೆಯೋ ಇಲ್ಲವೇ ತುಂಡುಡುಗೆಯೋ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಇದು ಮಾಡರ್ನ್ ಲುಕ್ ಸೀರೆ ಎಂದು ಹೇಳಿಕೊಂಡಿರುವ ಮಲ್ಲಿಕಾ ಸದ್ಯ ಜಾಲತಾಣದಲ್ಲಿ ಸೀರೆ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ರೀತಿ ಸೀರೆ ಉಟ್ಟು ಭಾರತೀಯ ಸಂಪ್ರದಾಯದ ಸೀರೆಗೆ ಇರುವ ಮರ್ಯಾದೆಯನ್ನು ಕಳೆಯಬೇಡಿ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಸದಾ ಸೆಕ್ಸಿ ಉಡುಪು ತೊಟ್ಟು ಪೋಸ್ ಕೊಡುವ ನೀವು ಸೀರೆಗೆ ಈ ರೀತಿ ಅವಹೇಳನ ಮಾಡುವುದು ಸರಿಯಲ್ಲ ಎಂದು ಕೆಂಡ ಕಾರಿದ್ದಾರೆ.
PublicNext
02/09/2021 12:24 pm