ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನ 'ಸಿಟಾಡೆಲ್' ಹೆಸರಿನ ಭಾರಿ ಬಜೆಟ್‌ನ ವೆಬ್ ಸರಣಿಯೊಂದರಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ಪ್ರಿಯಾಂಕಾರದ್ದು ಮುಖ್ಯ ಪಾತ್ರ. ವೆಬ್ ಸರಣಿಯ ಚಿತ್ರೀಕರಣವ ವೇಳೆ ಪ್ರಿಯಾಂಕಾಗೆ ಗಾಯವಾಗಿದೆ.
ಪ್ರಿಯಾಂಕಾ ಚೋಪ್ರಾರ ಎಡಹುಬ್ಬಿನ ಮೇಲೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ತಮಗೆ ಗಾಯವಾಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಮುಖದ ಮೇಲೆ ಇನ್ನೂ ಕೆಲವು ಗಾಯಗಳು ಇವೆ.
PublicNext
28/08/2021 03:25 pm