ಬೆಂಗಳೂರು: ಬುಹುಭಾಷಾ ನಟ ಪ್ರಕಾಶ್ ರೈ ತಮ್ಮ 56ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಿದ್ದಾರೆ.
ಹೌದು. ಪ್ರಕಾಶ್ ರೈ ಅವರು ಈಗ ಮತ್ತೊಮ್ಮೆ ಮದುವೆಯಾಗಿರುವುದು ಕೂಡ ತಮ್ಮ ಪತ್ನಿ ಪೋನಿ ವರ್ಮಾ ಅವರನ್ನೇ. ಹನ್ನೊಂದು ವರ್ಷಗಳ ಹಿಂದೆ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನು ಪ್ರೇಮಿಸಿ ಪ್ರಕಾಶ್ ರಾಜ್ ವಿವಾಹವಾಗಿದ್ದರು. ಅವರಿಗೆ ವೇದಾಂತ್ ಅಂತ ಮಗ ಇದ್ದಾನೆ. ಮಗನಿಗೆ ಮತ್ತೊಮ್ಮೆ ತಮ್ಮ ಅಪ್ಪ-ಅಮ್ಮ ಮದುವೆಯಾಗೋದನ್ನ ನೋಡಬೇಕು ಅಂತಾ ಆಸೆ ಆಗಿತ್ತಂತೆ. ಹೀಗಾಗಿಯೇ ಪುತ್ರನ ಆಸೆ ಈಡೇರಿಕೆಗಾಗಿ, ಪರಸ್ಪರ ತುಟಿಗೆ ಮುತ್ತನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಪುತ್ರನ ಮುಂದೆ ಮದುವೆ ಮಾಡಿಕೊಂಡಿದ್ದಾರೆ.
ಪುತ್ರ ವೇದಾಂತ್‌ಗಾಗಿ ಈ ಮದುವೆಯನ್ನು ಏರ್ಪಡಿಸಲಾಗಿತ್ತು ಎಂದು ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಅವರು ಹಂಚಿಕೊಂಡಿರುವ ವಿವಾಹದ ಚಿತ್ರಗಳು ವೈರಲ್ ಆಗಿದ್ದು, ಪ್ರಕಾಶ್ ರಾಜ್ ಹೆಸರು ಟ್ರೆಂಡಿಂಗ್‌ನಲ್ಲಿದೆ.
PublicNext
25/08/2021 12:16 pm